ದೈನಂದಿನ ತರಬೇತಿಯಲ್ಲಿ ತೊಡಗದ್ದ ಭಾರತೀಯ ವಾಯುಪಡೆಯ ಮಿಗ್ – ೨೧ ಯುದ್ಧ ವಿಮಾನವು ಗುರುವಾರ ರಾತ್ರಿ ೧ ಗಂಟೆಯ ಸುಮಾರಿಗೆ ಪಂಜಾಬ್ ನ ಮೊಗ ಜಿಲ್ಲೆಯಲ್ಲಿ ಅಪಘಾತಕೀಡಾಗಿದೆ ಎಂದು ಭಾರತೀಯ ವಾಯು ಪಡೆಯು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಈ ಘಟನೆಯಲ್ಲಿ ಪೈಲೆಟ್ ಸ್ಕ್ವಾಡೆನ್ ಲೀಡರ್ ಅಭಿನವ್ ಚೌಧರಿಯವರ ಮೃತ್ಯುವಾಗಿದ್ದು ಮತ್ತು ವಿಮಾನ ಭಾಗಶ: ಬೆಂಕಿಗಾಹುತಿಯಾಗಿದೆ ಎಂದು ವರಿದಿಯಲ್ಲಿ ತಿಳಿಸಲಾಗಿದೆ. ವಿಚಾರಣಾ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಆದೇಶಿಸಲಾಗಿದೆ.
ಭಾರತೀಯ ವಾಯುಪಡೆ ವೀರ ಮರಣವಪ್ಪಿದ ಅಭಿನವ್ ಚೌಧರಿಯವರಿಗೆ ಶ್ರದ್ಧಾಂಜಲಿ ಕೋರಿದ್ದು ಕುಟುಂಬದವರಿಗೆ ಶಾಂತ್ವನ ಹೇಳಿದ್ದಾರೆ.