ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ : ಕರ್ನಾಟಕದ 20ನೇ ಮುಖ್ಯಮಂತ್ರಿ

ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ!

Basavaraj Bommai: ಅಪ್ಪ ಜನತಾ ಪಕ್ಷದಿಂದ ಮಗ ಜನತಾ ಪಾರ್ಟಿಯಿಂದ ಮುಖ್ಯಮಂತ್ರಿ:

ಹೈಲೈಟ್ಸ್‌:

  • ಅಪ್ಪ ಎಸ್‌.ಆರ್‌ ಬೊಮ್ಮಾಯಿ ಅಲಂಕರಿಸಿದ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ
  • ಅಪ್ಪ-ಮಗ ರಾಜ್ಯದ ಚುಕ್ಕಾಣಿ ಹಿಡಿದಿದ್ದು ಇದು ಎರಡನೇ ಬಾರಿ
  • ಈ ಹಿಂದೆ ಎಚ್‌.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿದ್ದರು

Basavaraj Bommayi elected as Karnataka CM

New CM of Karnataka 2021

 

ಬೆಂಗಳೂರು: ಯಡಿಯೂರಪ್ಪ ಅವರ ಉತ್ತರಾಧಿಕಾರಿ ಪಟ್ಟ ಪಕ್ಷದ ಹಿರಿಯ ನಾಯಕ ಬಸವಾಜ ಬೊಮ್ಮಾಯಿ ಅವರು ಪಾಲಾಗಿದೆ. ಆ ಮೂಲಕ ಮೂರುವರೆ ದಶಕಗಳ ಬಳಿಕ ತನ್ನ ತಂದೆ ಎಸ್‌.ಆರ್‌ ಬೊಮ್ಮಾಯಿ ಅವರು ಅಲಂಕರಿಸಿದ್ದ ಪೀಠವನ್ನು ಬಸವರಾಜ ಬೊಮ್ಮಾಯಿ ಅಲಂಕರಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವ ಮೂಲಕ ರಾಜ್ಯದಲ್ಲಿ ಅಪ್ಪ-ಮಗ ಮಗ ಮುಖ್ಯಮಂತ್ರಿಯಾದ ಎರಡನೇ ನಿದರ್ಶನಕ್ಕೆ ರಾಜ್ಯ ಸಾಕ್ಷಿಯಾಗಿದೆ. ಈ ಹಿಂದೆ ಎಚ್‌.ಡಿ ದೇವೇಗೌಡ ಹಾಗೂ ಅವರ ಪುತ್ರ ಎಚ್‌.ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

 

ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ!


ರಾಜ್ಯದ ಹನ್ನೊಂದನೇ ಮುಖ್ಯಮಂತ್ರಿಯಾಗಿದ್ದ ಎಸ್‌. ಆರ್‌ ಬೊಮ್ಮಾಯಿ ಅವರು ಕೇವಲ ಒಂಭತ್ತು ತಿಂಗಳು ಮಾತ್ರ ಅಧಿಕಾರದಲ್ಲಿ ಇದ್ದರು. ಇದೀಗ ಅವರ ಪುತ್ರ ಬಸವರಾಜ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಚುನಾವಣೆಗೆ ಇನ್ನೂ ಕೇವಲ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿರುವುದರಿಂದ ಅವರೂ ಕೂಡ ಐದು ವರ್ಷ ಪೂರೈಸಲು ಅಸಾಧ್ಯ. ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರೂ ಕೂಡ ಅವಧಿ ಪೂರ್ಣಗೊಳಿಸದೇ ನಿರ್ಗಮಿಸಿದ್ದರು.

 

ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅದಕ್ಕೂ ಮುನ್ನ ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅದಕ್ಕೂ ಹಿಂದೆ ಮಾಜಿ‌ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.ರಾಜ್ಯದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದ ಮೊದಲ ಅವಧಿಯಲ್ಲೇ ಸಚಿವರಾದ ಹೆಗ್ಗಳಿಕೆ ಬೊಮ್ಮಾಯಿಯವರದ್ದು. 2008-2013ರ ವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ ಅನುಭವ ಅವರಿಗೆ. ಅಲ್ಲದೇ ಯಡಿಯೂರಪ್ಪನವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾದಾಗ ಗೃಹ, ಕಾನೂನು, ಸಂಸದೀಯ ಸಚಿವರಾಗಿ ಕೆಲಸ ಮಾಡಿದ ಅನುಭವ ಬೊಮ್ಮಾಯಿ ಅವರ ಬೆನ್ನಿಗಿದೆ.

Source link

 

Leave a Comment