ಅಯೋಧ್ಯೆ ಪವಿತ್ರ ಮಂತ್ರಾಕ್ಷತೆ(Mantrakshate) ಅಂದ್ರೆ ಏನು? ಮಂತ್ರಾಕ್ಷತೆಯ ಮಹತ್ವ ಏನು? ಹೇಗೆ ಬಳಸಬಹುದು?
Table of Contents
Ayodhya Mantrakshate ಲಕ್ಷಾಂತರ ರಾಮ ಭಕ್ತರ ಕನಸು ಅಯೋಧ್ಯೆ ರಾಮ ದೇವರ ಪ್ರತಿಷ್ಠಾಪನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮಂತ್ರಾಕ್ಷತೆಯ ರೂಪದಲ್ಲಿ ಈಗಾಗಲೇ ಅಯೋಧ್ಯೆಯಿಂದ ನಿಮ್ಮ ಮನೆಗೂ ತಲುಪಿರುತ್ತದೆ. ಈ ಪವಿತ್ರ ಮಂತ್ರಾಕ್ಷತೆಯನ್ನು ಪ್ರತೀ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ರಾಮ ಭಕ್ತರು ವಹಿಸಿಕೊಂಡಿದ್ದಾರೆ. ಇದರಂತೆ ಈಗಾಗಲೇ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು (Ayodhya Mantrakshate) ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಅಯೋಧ್ಯೆಯ ಈ ಪವಿತ್ರ ಮಂತ್ರಾಕ್ಷತೆಯನ್ನು ಮನೆಗೆ ತಲುಪಿಸುವ ವೇಳೆ ಸ್ವಯಂ ಸೇವಕರು ಈಗಾಗಲೇ ಅದರ ಮಹತ್ವ, ಉಪಯೋಗ ಮತ್ತು ಪ್ರಯೋಜನವನ್ನು ವಿವರಿಸುತ್ತಾರೆ. ಈ ಪವಿತ್ರ ಮಂತ್ರಾಕ್ಷತೆಯನ್ನು ಏನು ಮಾಡಬೇಕು? ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ನಾವು ತಿಳಿಯೋಣ.
ಅಯೋಧ್ಯೆಯ ರಾಮ ದೇವರ ಪವಿತ್ರ ಮಂತ್ರಾಕ್ಷತೆ ತೆ(Mantrakshate) ಅಂದರೆ ಏನು?
ಪವಿತ್ರ ಮಂತ್ರಾಕ್ಷತೆ ಪ್ರತೀ ಮನೆ ಮನೆಗೆ ತಲುಪಿದೆ. ಆದರೆ ಮಂತ್ರಾಕ್ಷತೆ ಎಂದರೇನು ಎಂದು ಗೊತ್ತಿಲ್ಲದಿದ್ದರೆ ಹೇಗೆ ಆಲ್ವಾ. ನಮ್ಮ ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಬಹಳ ಹೆಚ್ಚಿನ ಮಹತ್ವ ಇದೆ. ಹೆಚ್ಚಿನ ದೇವಸ್ಥಾನದಲ್ಲಿ ಅಕ್ಕಿ ರೂಪದ ಮಂತ್ರಾಕ್ಷತೆಯನ್ನು ಪ್ರಸಾದದ ರೂಪದಲ್ಲಿ ಹಾಗೂ ದೇವರ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ. ಮದುವೆ, ಮತ್ತಿತರ ಶುಭಸಮಾರಂಭಗಳಲ್ಲಿ ಅಕ್ಷತೆಯನ್ನು ಬಳಸುವ ಸಂಪ್ರದಾಯ ನಮ್ಮಲ್ಲಿ ಇದೆ. ಈ ಸಂದರ್ಭದಲ್ಲಿ ಬಳಸುವ ಅಕ್ಷತೆಯಲ್ಲಿ ಲಕ್ಷಾಂತರ ಜನರ ಆಶೀರ್ವಾದ, ಪ್ರಾರ್ಥನೆ ಇರುತ್ತದೆ. ಅದೇ ಪವಿತ್ರ ಕ್ಷೇತ್ರದಿಂದ ತರಲಾಗುವ ಅಕ್ಷತೆಯನ್ನು ಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ. ಅದೇ ರೀತಿ ಅಯೋಧ್ಯೆಯಿಂದ ರಾಮನ ಹೆಸರಿನೊಂದಿಗೆ ತರಲಾದ ಅಕ್ಕಿಯನ್ನು ರಾಮ ಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ.
ಅಯೋಧ್ಯೆಯ ರಾಮ ದೇವರ ಪವಿತ್ರ ಮಂತ್ರಾಕ್ಷತೆಯ (Ayodhya Mantrakshate) ವಿಶೇಷತೆ ಏನು?
ಅಯೋಧ್ಯೆಯ ರಾಮ ದೇವರ ಪವಿತ್ರ ಮಂತ್ರಾಕ್ಷತೆಗೆ ತೆ(Mantrakshate) ಸಾಕಷ್ಟು ಮಹತ್ವ ಮತ್ತು ವಿಶೇಷತೆ ಇದೆ. ಮಂತ್ರಾಕ್ಷತೆ ಮನೆಗೆ ಬಂತೆಂದರೆ ದೇವರೇ ಮನೆಗೆ ಬಂದಂತೆ ಎಂಬ ಮಾತಿದೆ. ಶ್ರೀ ರಾಮ ದೇವರ ಜನ್ಮ ಸ್ಥಳದಿಂದ ಬಂದ ಮಂತ್ರಾಕ್ಷತೆ ಶ್ರೀ ರಾಮನ ಹದಿನಾರು ಸಾತ್ವಿಕ ಗುಣಗಳು ಇದೆ ಎಂದು ಹೇಳಲಾಗುತ್ತದೆ. ಮತ್ತು ಆ ಎಲ್ಲಾ ಸಾತ್ವಿಕ ಗುಣಗಳು ಆ ಮಂತ್ರಾಕ್ಷತೆಯನ್ನು ಸ್ವೀಕರಿಸುವ ಪ್ರತೀ ಹಿಂದೂ ಮನೆಗಳಲ್ಲೂ ನೆಲೆಸಬೇಕು ಎಂದು ಹಾರೈಕೆಯಾಗಿರುತ್ತದೆ.
ರಾಮದೇವರ ಪವಿತ್ರ ಮಂತ್ರಾಕ್ಷತೆಯ (Ayodhya Mantrakshate) ವಿತರಣೆ ಹೇಗೆ?
ಅಯೋಧ್ಯೆಯಿಂದ ರಾಜ್ಯದ ಪ್ರಮುಖ ರಾಮ ದೇವಸ್ಥಾನ ಅಥವಾ ಹನುಮಂತ ದೇವಸ್ಥಾನ ಮುಖಾಂತರ ಆಯಾ ಜಿಲ್ಲೆ ತಾಲೂಕು ದೇವಸ್ಥಾನ ಭಜನಾ ಮಂದಿರಗಳಲ್ಲಿ ಮಂತ್ರಾಕ್ಷತೆಯನ್ನು ವೃದ್ಧಿ ಮಾಡಿ ನಂತರ ಗ್ರಾಮದ ದೇವಸ್ಥಾನದಲ್ಲಿ ಇರಿಸಿ ಪೂಜೆ ಪುರಸ್ಕಾರ ನೆರವೇರಿಸಿ ನಂತರ ಆಯಾ ವಾರ್ಡ್ ಮೂಲಕ ಪ್ರತೀ ಹಿಂದೂ ಮನೆಗಳಿಗೆ ಹಂಚಲು ಸ್ವಯಂ ಸೇವಕರ ತಂಡ ಮಾಡಿ ವಿತರಿಸಲಾಗುತ್ತದೆ. ಪ್ರತೀ ಸ್ವಯಂ ಸೇವಕ ತಂಡಗಳು ಶುಭ್ರ ಬಿಳಿ ವಸ್ತ್ರ ಧರಿಸಿ ಬರಿಗಾಲಲ್ಲಿ ಪ್ರತೀ ಹಿಂದೂ ಮನೆ ಮನೆಗೆ ಹೋಗಿ ವಿತರಿಸಬೇಕು.
ವಿತರಿಸುವ ಸಮಯದಲ್ಲಿ ಮಂತ್ರಾಕ್ಷತೆಯ ಮಹತ್ವ, ಪುರಸ್ಕರಿಸುವ ಪರಿ, ಶುದ್ಧಾಚರಣೆ ಮತ್ತು ಜನವರಿ 22 ರ ಕಾರ್ಯಕ್ರಮದ ಬಗ್ಗೆ ತಿಳಿಸಿ ಹೇಳಬೇಕು. ನಿಗದಿತ ದಿನಾಂಕದ ಒಳಗೆ ಮಂತ್ರಾಕ್ಷತೆಯನ್ನು ಗ್ರಾಮದ ಪ್ರತೀ ಹಿಂದೂಗಳ ಮನೆಗೆ ತಲುಪಿಸಬೇಕು. ಕಾರ್ಯಕರ್ತರು ಮಂತ್ರಾಕ್ಷತೆಯ ಜೊತೆಗೆ ಶ್ರೀರಾಮ ಮಂದಿರದ ಭಾವಚಿತ್ರ ಮತ್ತು ಒಂದು ಪತ್ರಕ ಇರಬೇಕು. ಮಂತ್ರಾಕ್ಷತೆಯನ್ನು ಮನೆಯ ಒಳಗಡೆ ಹೋಗಿ ಮನೆ ಮಂದಿಯನ್ನು ನಿಲ್ಲಿಸಿ ರಾಮ ಜಪ ಮಾಡಿ ವಿತರಿಸಬೇಕು. ಅಕ್ಷತೆಯನ್ನು ಖಾಲಿ ಕೈಗೆ ನೀಡುವಂತಿಲ್ಲ. ಬದಲಾಗಿ ಒಂದು ಪೂಜೆಗೆ ಬಳಕೆಯಾಗುವ ತಟ್ಟೆಯಲ್ಲಿ ಒಂದು ಸಣ್ಣ ಗಿಂಡಿ ಅಥವಾ ಸಣ್ಣ ಕಲಶ ತೆಗೆದುಕೊಂಡು ಅದರಲ್ಲಿ ಅರ್ಧದಷ್ಟು ಬೆಳ್ತಿಗೆ ಹಾಕಿ ಕೊಡುವಂತೆ ಹೇಳಬೇಕು. ನಂತರ ರಾಮ ತಾರಕ ಮಂತ್ರ ಜಪ ಮಾಡಿಕೊಂಡು ಈ ಮಂತ್ರಾಕ್ಷತೆಯನ್ನು ಹಾಕಬೇಕು ಬೆಳ್ತಿಗೆ ಜೊತೆಗೆ ಸೇರಿಸಬೇಕು. ಮಂತ್ರಾಕ್ಷತೆಯನ್ನು ಸ್ವೀಕರಿಸುವ ಮನೆಯವರು ಸಹ ಸ್ನಾನ ಮಾಡಿ ಶುದ್ಧಾಚರಣೆ ಮಾಡಿ ಎಲ್ಲರೂ ಒಟ್ಟಾಗಿ ನಿಂತು ಭಕ್ತಿಯಿಂದ ಸ್ವೀಕರಿಸಬೇಕು.
ಮನೆಯಲ್ಲಿ ಮಂತ್ರಾಕ್ಷತೆಯನ್ನು (Ayodhya Mantrakshate) ಸ್ವೀಕರಿಸಿದ ನಂತರ ಹೇಗೆ ಆಚರಿಸಬೇಕು?
- ಮಂತ್ರಾಕ್ಷತೆ ಮನೆಗೆ ಬಂದ ನಂತರ ಜನವರಿ 22 ರ ತನಕ ಶುದ್ಧಾಚರಣೆ ಮಾಡಬೇಕು
- ಮಾಂಸಾಹಾರ ಸೇವನೆ ಮಾಡಬಾರದು.
- ಮಂತ್ರಾಕ್ಷತೆ ದೇವರ ಕೋಣೆಯಲ್ಲಿ ಇಟ್ಟು ಜನವರಿ 22 ರ ತನಕ ಭಜನೆ ಆರತಿ ಪೂಜೆ ಮಾಡಬೇಕು.
- ಪ್ರತಿ ನಿತ್ಯ ರಾಮ ತಾರಕ ಮಂತ್ರ ಜಪಿಸಬೇಕು
- ಜನವರಿ 22 ರಂದು ಸಂಜೆ ಸ್ನಾನದ ಬಳಿಕ, ಮನೆಯವರೆಲ್ಲರೂ ಸೇರಿ ತುಳಸಿ ಕಟ್ಟೆಯ ಬಳಿ ಐದು ಅಥವಾ ಅದಕ್ಕಿಂತ ಹೆಚ್ಚು ದೀಪಗಳನ್ನು ಉರಿಸಿ ಉತ್ತರ ದಿಕ್ಕಿಗೆ ಮುಖ ಮಾಡಿ ರಾಮ ಜಪ ಮಾಡಬೇಕು
- ನಂತರ ಮಂತ್ರಾಕ್ಷತೆಯನ್ನು ಪ್ರಸಾದದ ರೂಪದಲ್ಲಿ ಬಳಸಬಹುದು.
ಮನೆಗೆ ಬಂದ ಶ್ರೀರಾಮ ದೇವರ ಮಂತ್ರಾಕ್ಷತೆಯನ್ನು ಯಾವ ರೀತಿ ಬಳಸಬೇಕು? How to use Ayodhya Mantrakashate?
ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಸ್ವೀಕರಿಸಿದ ನಂತರ ಮೊದಲು ನೇರವಾಗಿ ದೇವರ ಕೊನೆಯಲ್ಲಿ ಇಟ್ಟು ಜನವರಿ ೨೨ ರ ತನಕ ಪೂಜೆ ಭಜನೆ ಜಪ ತಪ ಮುಂತಾದ ಕೈಂಕರ್ಯ ಮಾಡಬೇಕು. ಇಪ್ಪತ್ತೆರಡು ತಾರೀಕಿನಂದು ಮಧ್ಯಾಹ್ನ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ನಂತರ ಈ ಮಂತ್ರಾಕ್ಷತೆಗೆ (Ayodhya Mantrakshate) ವಿಶೇಷ ಶಕ್ತಿ ಬರುತ್ತದೆ ಎಂಬ ಮಾತಿದೆ. ಅದಲ್ಲದೆ ಅಷ್ಟು ದಿನ ದೇವರಕೋಣೆಯಲ್ಲಿ ರೀತಿಯ ಪೂಜೆ ಭಜನೆ ಸಕಲಾದಿಗಳು ನೆರವೇರುವುದರಿಂದ ಈ ಮಂತ್ರಾಕ್ಷತೆಗೆ ವಿಶೇಷ ರೀತಿಯ ಪಾವಿತ್ರತೆ ಮತ್ತು ಶಕ್ತಿ ಬಂದಿರುತ್ತದೆ. ಆದ್ದರಿಂದ ಈ ಮಂತ್ರಾಕ್ಷತೆಯನ್ನು ವಿವಿಧ ರೀತಿಯಲ್ಲಿ ಬಳಸಬಹುದು.
- ಮಂತ್ರಾಕ್ಷತೆಯನ್ನ ಮನೆಯ ಅಕ್ಕಿಗೆ ಸೇರಿಸಿ ಪಾಯಸ ಮಾಡಿ ಸೇವಿಸಬಹುದು
- ಊಟದ ಅಕ್ಕಿ ಜೊತೆ ಮಂತ್ರಾಕ್ಷತೆಯನ್ನು ಸೇರಿಸಿ ಅನ್ನ ಮಾಡಿ ಸೇವಿಸಬಹುದು.
- ಮಂತ್ರಾಕ್ಷತೆಯನ್ನು ದೇವರ ಕೋಣೆಯಲ್ಲಿಯೂ ಶಾಶ್ವತವಾಗಿ ಇಟ್ಟುಕೊಳ್ಳಬಹುದು.
- ಮಂತ್ರಾಕ್ಷತೆಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಹಣ, ಚಿನ್ನ ಇಡುವ ಕಪಾಟುಗಳಲ್ಲಿ ಇಟ್ಟುಕೊಳ್ಳಬಹುದು.
- ಮನೆಯ ಮುಂಬಾಗಿಲಿಗೆ ಬಿಳಿ ಬಟ್ಟೆಯಲ್ಲಿ ಕಟ್ಟಿ ಬಿಡಬಹುದು.
- ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ಅಕ್ಷತೆಯ ರೂಪದಲ್ಲಿ ತಲೆಗೆ ಹಾಕಿಕೊಳ್ಳಬಹುದು.