ನಾಯಿಯನ್ನು ಟ್ವಿಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್?

ನಾಯಿಯನ್ನು ಟ್ವಿಟ್ಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್?

Elon Musk twitter CEO: ಎಲಾನ್ ಮಸ್ಕ್ ಇತ್ತೀಚಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಟ್ವಿಟ್ಟರ್ ಅನ್ನು ಖರೀದಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಪರಾಗ್ ಅಗರ್ವಾಲ್ ರನ್ನು ಟ್ವಿಟ್ಟರ್ ನ ಸಿಇಓ ಸ್ಥಾನದಿಂದ ವಜಾಗೊಳಿಸಿ ಎಲಾನ್ ಮಸ್ಕ್ ಮಾಡಿದ್ದ ಸುದ್ಧಿಯೂ ಸಹ ಬಹಳ ಸಂಚಲನ ಉಂಟು ಮಾಡಿತ್ತು. ಹೀಗೆ ಎಲಾನ್ ಮಸ್ಕ್ ಹಲವು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಎಲಾನ್ ಮಸ್ಕ್ ಯಾರು ಎಂಬುದು ಗೊತಿಲ್ಲದವರಿಗೆ Elon Musk Biography ಲೇಖನ ಸಂಪೂರ್ಣ ವಿವರ ನೀಡುತ್ತದೆ. ಒಮ್ಮೆ ಓದಿ.

Elon Musk twitter CEO
Elon Musk twitter CEO

ಎಲಾನ್ ಮಸ್ಕ್ ಒಬ್ಬ ಜಗತ್ತಿನ ತಾಂತ್ರಿಕ ಕ್ಷೇತ್ರದಲ್ಲಿ ಎಂದು ನೆನಪು ಇರುವಂತಹ ಹೆಸರು. ಎಲಾನ್ ಮಸ್ಕ್ ಸೀನಿದರು ದೊಡ್ಡ ಸುದ್ಧಿಯಾಗುತ್ತದೆ. ಈತ್ತೀಚೆಗೆ ಎಲಾನ್ ಮಸ್ಕ್ ಮಾಡಿದ ಒಂದು ಟ್ವೀಟ್ ಇಡೀ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾದ Elon Musk ಕೆಲ ತಿಂಗಳ ಹಿಂದೆ ಖರೀದಿಸಿದ ಟ್ವಿಟ್ಟರ್ ಸಂಸ್ಥೆಯ ಕಚೇರಿಯಲ್ಲಿ ಸಿಇಓ ಕುರ್ಚಿಯಲ್ಲಿ ತನ್ನ ಮುದ್ದಿನ ನಾಯಿ ಪ್ಲೋಕಿಯನ್ನು ಕೂರಿಸಿ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದೆ. 

ಪ್ಲೋಕಿ ನಾಯಿ ಶಿಬಾ ಇನು(Shiba Inu) ಜಾತಿಗೆ ಸೇರಿದ ವಿಶೇಷ ಆಕರ್ಷಣೀಯ ನಾಯಿಯಾಗಿದೆ. ಎಲಾನ್ ಮಸ್ಕ್ ಈ ನಾಯಿಯನ್ನು ಸಿಇಓ ಕುರ್ಚಿಯಲ್ಲಿ ಕೂರಿಸಿ ಇದು ಈ ಹಿಂದಿನ ಸಿಇಓ ಪರಾಗ್ ಅಗರ್ವಾಲ್ ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಎಲಾನ್ ಮಸ್ಕ್ ಪರಾಗ್ ಅಗರ್ವಾಲ್ ಬಗ್ಗೆ ಪರೋಕ್ಷವಾಗಿ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದೀಗ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪರ ಮತ್ತು ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದೆ.

ಸದ್ಯಕ್ಕೆ ಟ್ವಿಟ್ಟರ್ ಸಂಸ್ಥೆಯ ಸಿಇಓ(Twitter CEO) ಆಗಿ ತಾನೇ ಮುಂದುವರಿಯುತ್ತಿದ್ದೇನೆ ಎಂದು ಕೊನೆಯಲ್ಲಿ ಸ್ಪಷ್ಟ ಪಡಿಸಿದ ಎಲಾನ್ ಮಸ್ಕ್ ಈ ವರ್ಷಾಂತ್ಯದೊಳಗೆ ಹೊಸ ಸಿಇಓ ವನ್ನು ಟ್ವಿಟ್ಟರ್ ಸಂಸ್ಥೆಗೆ ನೇಮಕ ಮಾಡುವುದಾಗಿ ತಿಳಿಸಿದ್ದಾರೆ.

 

Click to Join Whatsapp Group

 

Read Also

Leave a Comment