ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ 

ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ 

 

Amit Shah visit to Puttur: ಚುನಾವಣೆ ಹತ್ತಿರ ಬರುತ್ತಲೇ ಚುನಾವಣಾ ಅಖಾಡಗಳು ರಂಗೇರುವುದು ಸಹಜ. ಕಳೆದ ಮೂರೂ ತಿಂಗಳಲ್ಲಿ ಸತತ ಮೂರನೇ ಬಾರಿ ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಮಂತ್ರಿ ಮತ್ತು ಚುನಾವಣಾ ಚಾಣಕ್ಯರಾದ ಅಮಿತ್ ಶಾ Amit Shah ಈ ಸಲ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರವನ್ನು ತಂದೆ ತೀರುತ್ತೇವೆ ಎಂದು ಹಠ ಹಿಡಿದಂತಿದೆ. ಈ ಸಲ ಚಾಣಕ್ಯ ಅಮಿತ್ ಶಾ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲ, ಪುತ್ತೂರು, ಮತ್ತು ಮಂಗಳೂರಿಗೆ ಭೇಟಿ ನೀಡಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆ ಇಲ್ಲಿನ  ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯವನ್ನು ಮಾಡಲಿದ್ದಾರೆ. 

 

ಕರ್ನಾಟಕದ ರಾಜಕೀಯ ಅಖಾಡ ಇಡೀ ದೇಶದ ಗಮನ ಸೆಳೆಯುತ್ತಿರುವುದಂತು ನಿಜ. ರಾಜ್ಯದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳು ಮಾತ್ರ ಕೇಂದ್ರದ ನಾಯಕರುಗಳನ್ನೇ ತಿರುಗಿ ನೋಡುವಂತೆ ಮಾಡಿರುವುದು ಗೊತ್ತೇ ಇದೆ. ಸ್ವಪಕ್ಷ ದ ನಾಯಕರುಗಳ ನಡುವಿನ ಗೊಂದಲಗಳು, ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರುಗಳ ನಡುವಿನ ವಾಕ್ಸಮರಗಳು ಇಲ್ಲಿನ ರಾಜಕೀಯ ಭವಿಷ್ಯವನ್ನು ಪ್ರಶ್ನೆ ಮಾಡುವಂತೆ ಮಾಡುತ್ತಿದೆ. 

Amit Shah visit to Puttur

ಇದೆಲ್ಲವನ್ನು ಮನದಲ್ಲಿಟ್ಟುಕೊಂಡೇ ಹೈಕಮಾಂಡ್ ತನ್ನ ಚತುರತೆಯಿಂದ ಮತ್ತು ಚಾಣಾಕ್ಷತೆಯಿಂದ ರಾಜಕೀಯ ದಾಳ ಕೈ ತಪ್ಪದಂತೆ ನೋಡಿಕೊಳ್ಳುತ್ತಿದೆ. ನಾಳೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ ಅನೇಕ ವಿಷಯಗಳಿಗೆ ಮುನ್ನುಡಿ ಬರೆಯಲಿದೆ. 

 

ನಾಳಿನ ಅಮಿತ್ ಶಾ ಭೇಟಿ ಕಾರ್ಯಕ್ರಮಗಳ ವಿವರ ಹೀಗಿದೆ. 

 

Amit Shah visit to Puttur: ಇತ್ತೀಚಿಗೆ ಅಮಿತ್ ಶಾ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಅದರ ನಂತರ ನಾಳೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ಕೇಸರಿ ಪಾಳಯ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ. ಪುತ್ತೂರು ಮತ್ತು ಮಂಗಳೂರಿನಲ್ಲಿ ಒಂದು ದಿನದ ಪ್ರವಾಸವನ್ನು ಮೆನಿ ಅಮಿತ್ ಶಾ ಅವರು ಕೈಗೊಂಡಿದ್ದಾರೆ. Amit Shah visit to Puttur. 

 

ನಾಳೆ ಮಧ್ಯಾಹ್ನ 2.15pm ಗಂಟೆಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಇಲ್ಲಿಂದ ಬಿ ಎಸ್ ಎಫ್ ಹೆಲಿಕಾಪ್ಟಾರ್ ಮುಖಾಂತರ ಮಧ್ಯಾಹ್ನ 2.45 pm ಗೆ ಪುತ್ತೂರಿನ ಈಶ್ವರಮಂಗಲಕ್ಕೆ ತಲುಪಲಿದ್ದಾರೆ.  ಮಧ್ಯಾಹ್ನ 2.50 pm ಗೆ ಹನುಮಗಿರಿಯಲ್ಲಿ ಪೂಜೆ ಸಲ್ಲಿಸಿ,  ನೂತನವಾಗಿ ನಿರ್ಮಿಸಲಾದ ದೇಶದ ಅಮರರನ್ನು ಮತ್ತು ಯೋಧರ ಬೆಗ್ಗೆ ಅನೇಕ ಕಥೆಗಳನ್ನು ಸಾರುವ ‘ಅಮರಗಿರಿ’ ಯನ್ನು ಮಾನ್ಯ ಬಿಜೆಪಿ ಚಾಣಕ್ಯ ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ. 

 

ನಂತರ ಸೇನಾ ಹೆಲಿಕಾಪ್ಟಾರ್ ಮೂಲಕ  ಪುತ್ತೂರಿಗೆ ಬಂದು ಇಳಿಯಲಿದ್ದಾರೆ. ಮಧ್ಯಾಹ್ನ 3.40 pm ಗೆ ಪ್ರತಿಷ್ಠಿತ ಕಾಮ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ನಂತರ ಪುತ್ತೂರಿನ ತೆಂಕಿಲದಲ್ಲಿ  ಆಯೋಜಿಸಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಸಂಜೆ 6.15 pm ಗಂಟೆಯಿಂದ ರಾತ್ರಿ 8 pm ವರೆಗೂ ಮಂಗಳೂರು ಏರ್ಪೋರ್ಟ್ ಸಮೀಪ ರಾಜ್ಯ ಬಿಜೆಪಿ ಪ್ರಮುಖ ನಾಯಕರುಗಳ ಜೊತೆ ಆಂತರಿಕ ಸಭೆ ನಡೆಸಲಿದ್ದಾರೆ. 

 

Loading poll ...
Coming Soon
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು?
{{ row.Answer_Title }} {{row.tsp_result_percent}} % {{row.Answer_Votes}} {{row.Answer_Votes}} ( {{row.tsp_result_percent}} % ) {{ tsp_result_no }}

 

Loading poll ...
Coming Soon
ಬರುವ ವಿಧಾನಸಭಾ ಚುನಾವಣೆಗೆ ಪುತ್ತೂರಿನಲ್ಲಿ ನಿಮ್ಮ ಆಯ್ಕೆ ಯಾರು ?
{{ row.Answer_Title }} {{row.tsp_result_percent}} % {{row.Answer_Votes}} {{row.Answer_Votes}} ( {{row.tsp_result_percent}} % ) {{ tsp_result_no }}

 

Click to Join Whatsapp Group

 

Read Also

 

Leave a Comment