ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ
Modi on Parliament: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modiji went to kashmir without protection) ಇತ್ತೀಚಿಗೆ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ಸಿಗರ ಆಧಾರ ರಹಿತ ಆರೋಪಗಳಿಗೆ ಖಡಕ್ ಆಗೇ ಉತ್ತರಿಸಿ ಕಾಂಗ್ರೆಸಿನ ನಾಯಕರುಗಳು ಮುಖ ಮುಚ್ಚಿಕೊಳ್ಳುವಂತೆ ಮಾಡಿದರು. ಹಲವು ವಿಚಾರವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿಜಿಯವರು ನಗುತ್ತಲೇ ವಿರೋಧ ಪಕ್ಷಗಳ ಕಾಲೆಳೆದರು.
ಭಯೋತ್ಪಾದಕರ ಅಟ್ಟಹಾಸದಿಂದ ನಲುಗಿದ್ದ ಕಾಶ್ಮೀರದಲ್ಲಿ ಇಂದು ತಮ್ಮ ಪರಿವಾರದೊಂದಿಗೆ ಆಟ ಆಡಿಕೊಂಡು ಖುಷಿಯಿಂದಲೇ ಸಮ್ಮೇಳನ ಮಾಡಿಕೊಂಡು ಅತ್ಯಂತ ನಿರ್ಭೀತಿಯಿಂದ ಸುರಕ್ಷಿತವಾಗಿ ಸಮಯ ಕಳೆದು ಮನೆಗೆ ವಾಪಸ್ ಆಗಿರುವ ಕಾಂಗ್ರೆಸಿನ ನಾಯಕರುಗಳು ಇಂತಹ ದಿನ ಬರಬಹುದು ಎಂದು ಊಹಿಸಿರಲಿಲ್ಲ ಎಂದು ಪರೋಕ್ಷವಾಗಿ ಮೋದಿಯವರು ನುಡಿದರು.
ಸುಮಾರು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿದ ನರೇಂದ್ರ ಮೋದಿಜಿಯವರು ಅವತ್ತು ಯಾರಾದರೂ ಅವರ ಅಮ್ಮನ ಎದೆ ಹಾಲು ಕುಡಿದಿದ್ದರೆ ಕಾಶ್ಮೀರಕ್ಕೆ ಬಂದು ಗಣರಾಜ್ಯ ದಿವಸದಂದು ರಾಷ್ಟ್ರ ದ್ವಜ ಹಾರಿಸಲಿ ಎಂದು ಭಯೋತ್ಪಾದಕರು ಬೆದರಿಕೆಯ ಭಿತ್ತಿಚಿತ್ರವನ್ನು ಕಾಶ್ಮೀರದಲ್ಲಿ ಅಲ್ಲಲ್ಲಿ ಅಂಟಿಸಿದ್ದರು. ಆದರೆ ನಾನು ಅವರಿಗೆ ಸವಾಲು ಹಾಕಿ, ಯಾವುದೇ ಸುರಕ್ಷತೆ ಇಲ್ಲದೆ, ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ ಕಾಶ್ಮೀರಕ್ಕೆ ಬಂದು ರಾಷ್ಟ್ರ ದ್ವಜ ಹಾರಿಸಿ ಯಾರು ತಾಯಿಯ ಎದೆ ಹಾಲು ಕುಡಿದವರು ಎಂದು ತೋರಿಸಿದ್ದೇನೆ ಎಂದು ನೆನಪಿಸಿದರು. (Narendra Modiji went to kashmir without protection).
ಹೀಗೆ ಮುಂದುವರಿಯುತ್ತಾ ಮಾನ್ಯ ಮೋದಿಜಿಯವರು ಜವಾಹರಲಾಲ್ ನೆಹರುರವರ ಸರ್ ನೇಮ್ ಆದ ನೆಹರುವನ್ನು ಕಾಂಗ್ರೆಸ್ ನಲ್ಲಿರುವ ಅವರ ವಂಶಕ್ಕೆ ಸಂಬಂಧ ಪಟ್ಟವರು ಯಾಕೆ ಬಳಸುತ್ತಿಲ್ಲ. ನೆಹರು ಹೆಸರನ್ನು ತಮ್ಮ ಹೆಸರಿನೊಂದಿಗೆ ಬಳಸಲು ನಿಮಗೆ ಯಾಕೆ ಮುಜುಗರ ಎಂದು ಕೇಳುತ್ತಲೇ ಸಂಸತ್ ಸಂಪೂರ್ಣ ಕರತಾಡನದಿಂದ ಕೂಡಿತ್ತು. (Narendra Modiji went to kashmir without protection, Modi on Parliament)
ಏನೇ ಆಗಲಿ ಸಂಸತ್ ಕಲಾಪದಲ್ಲಿ ಮೋದಿಜಿಯವರು ಕಾಂಗ್ರೆಸಿನ ನಾಯಕರುಗಳನ್ನು ಮಾತಿನಲ್ಲೇ ಬೆಂಡೆತ್ತಿದ್ದು ನಿಜ. ಇದರ ಜೊತೆಯಲ್ಲೇ ರಾಹುಲ್ ಗಾಂಧಿ ಸಹ ತಮ್ಮ ಮಾತಿನ ಚಾಟಿ ಬೀಸಿದರು. ತಮ್ಮ ಮಾತಿನದುದ್ದಕ್ಕೂ ಮೋದಿ ಮತ್ತು ಅದಾನಿ ಎಂಬ ಹೆಸರೇ ಕುಣಿದಾಡುತ್ತಿತ್ತು. ಮೋದಿ ಮತ್ತು ಅದಾನಿಯವರಿಗೆ ಏನು ಸಂಭಂದ, ಮೋದಿ ಮೊದಲು ಅದಾನಿಯವರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಆದರೆ ಈಗ ಅಡ್ಡನಿ ಮೋದಿಯವರ ವಿಮಾನದಲ್ಲಿ ಪ್ರಯಾಣಿಸುತ್ತಾರೆ, ಎಲ್ಲಾ ಸರಕಾರಿ ಉದ್ಯಮ ವಲಯಗಳನ್ನು ಖಾಸಗೀಕರಣ ಮಾಡಿ ಅದಾನಿಗೆ ಒಪ್ಪಿಸುತ್ತಿದ್ದಾರೆ, ಹೀಗೆ ಅನೇಕ ಟೀಕೆ ಟಿಪ್ಪಣಿಗಳನ್ನ ಮಾಡುತ್ತಾ ದೇಶದ ಅಭಿವೃದ್ಧಿಯ ವಿಚಾರವನ್ನೇ ಮಾತನಾಡುವುದನ್ನು ಮರೆತರು.
Watch Modi on Parliament Videos
Read Also