ಇವತ್ತು ಆಗಸ್ಟ್ 13, ನಾಗರ ಪಂಚಮಿಯ ದಿನ. ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಹಿಂದೂಗಳು ನಾಗ ದೇವತೆಗಳ ಮೇಲಿನ ಗೌರವದಿಂದ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಾಗರ ಪಂಚಮಿ ಮುಹೂರ್ತವು ಆಗಸ್ಟ್ 12 ರಂದು ಮಧ್ಯಾಹ್ನ 3:24 ಕ್ಕೆ ಆರಂಭವಾಗುತ್ತದೆ ಮತ್ತು ಆಗಸ್ಟ್ 13 ರಂದು ಮಧ್ಯಾಹ್ನ 1:42 ಕ್ಕೆ ಕೊನೆಗೊಳ್ಳುತ್ತದೆ. Happy Nag Panchami 2021.
Also Read : ಜಾಗರೂಕರಾಗಿರಿ : ದರೋಡೆಕೋರರಿಂದ ಎಚ್ಚರವಿರಲು ಪೊಲೀಸರಿಂದ ಕೆಲವೊಂದು ಸೂಚನೆಗಳು
ಶ್ರದ್ದೆಯಿಂದ ತಲೆಗೆ ಸ್ನಾನ ಮಾಡಿಕೊಂಡು ಒಂದು ತಟ್ಟೆಯಲ್ಲಿ ಅರಸಿನ ಹೂವು ಇಟ್ಟುಕೊಂಡು, ಬಿಂದಿಗೆಯಲ್ಲಿ ಹಾಲನ್ನು ಹಿಡಿದುಕೊಂಡು ದೇವಸ್ಥಾನಕ್ಕೆ ತೆರಳಿ ಅಥವಾ ಕೆಲವರು ತಮ್ಮ ಕುಟುಂಬದ ನಾಗ ಸನ್ನಿಧಿಗೆ ತೆರಳಿ ಅಲ್ಲಿ ಭಕ್ತರು ತಂಡ ಅರಸಿನ ಮತ್ತು ಹೂವನ್ನು ಹಾಕಿ ನಾಗನ ಹುತ್ತಕ್ಕೆ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿ ನಾಗ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವ ದಿನ ನಾಗರ ಪಂಚಮಿ. Happy Nag Panchami 2021.
ಶ್ರಾವಣ ಮಾಸದಲ್ಲಿ ಸರ್ಪ ದೇವತೆಗಳಿಗೆ ಪೂಜೆ ಸಲ್ಲಿಸುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ನಾಗರ ಪಂಚಮಿಯ ಈ ದಿನದಂದು ಹುತ್ತಕ್ಕೆ ಪೂಜೆ ಸಲ್ಲಿಸುವಾಗ ಬಹಳ ಜಾಗರೂಕತೆಯಿಂದ ಪೂಜೆ ಸಲ್ಲಿಸಿ. ಭಕ್ತರ ಪೂಜೆಯಿಂದ ಹುತ್ತದಲ್ಲಿರುವ ಸರ್ಪಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ. ಕೋವಿಡ್ ಅವಾಂತರ ಇರುವುದರಿಂದ ಅಂತರ ಕಾಯ್ದುಕೊಳ್ಳಿ. ಸರಕಾರದ ನಿಯಮಾವಳಿಯನ್ನು ಪಾಲಿಸಿ.
ನಾಡಿನ ಸಮಸ್ತ ಜನತೆಗೆ, ಓದುಗ ಪ್ರಭುಗಳಿಗೆ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು. ಒಳ್ಳೆಯದಾಗಲಿ.
Now branded Earbuds only at 299 Rs