ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಮೋಘ ಆಟವನ್ನಾಡಿ ಕ್ರಿಕೆಟ್ ಪ್ರೇಮಿಗಳ ಗಮನವನ್ನು ತನ್ನೆಡೆಗೆ ಸೆಳೆದ ಕಿರಿಯ ಪ್ರಾಯದ ಸ್ಪುರದ್ರೂಪಿ ಆಟಗಾರ ಕೇರಳದ ದೇವದತ್ ಪಡಿಕ್ಕಲ್ ಜೀವನದ ಕುರಿತ ಒಂದಷ್ಟು ಮಾಹಿತಿಗಳು.
ದೇವದತ್ ಪಡಿಕಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಓರ್ವ ಅದ್ಭುತ ಆಟಗಾರ. ದೇವದತ್ ಪಡಿಕ್ಕಲ್ ಭಾರತ ತಂಡದ ಅಂಡರ್ 19 ಪರ ಸಹ ಆಡಿದ್ದಾರೆ.
ಸದ್ಯ ಇವರು ಐಪಿಎಲ್ ನ ಆವೃತ್ತಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಒಪನಿಂಗ್ಸ್ ನಲ್ಲಿ ಆಡುತ್ತಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಲ್ ನ ಪಡಿಕ್ಕಲ್ ಕುಟುಂಬದಲ್ಲಿ ಬಾಬುನ್ ಕುನ್ನತ್ ಮತ್ತು ಅಂಬಲಿ ಬಾಲನ್ ದಂಪತಿಯ ಮಗನಾಗಿ ಜುಲೈ 7 ರ 2000 ದಲ್ಲಿ ದೇವದತ್ ಪಡಿಕ್ಕಲ್ ಜನಿಸುತ್ತಾರೆ.
ದೇವದತ್ತ ಪಡಿಕ್ಕಲ್ ರವರ ಸಂಪೂರ್ಣ ಹೆಸರು ದೇವದತ್ ಬಾಬುನ್ ಪಡಿಕ್ಕಲ್. ಪಡಿಕ್ಕಲ್ ರಿಗೆ ಓರ್ವ ಸಹೋದರ ಮತ್ತು ಸಹೋದರಿ ಇದ್ದಾರೆ. ಸಹೋದರಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಡಿಕ್ಕಲ್ ರವರ ತಂದೆ ಬಬೂನ್ ಕುಣ್ಣತ್ ಓರ್ವ ಕೇರಳದ ಉದ್ಯಮಿಯಾಗಿದ್ದು ಸಣ್ಣಂದಿನಿಂದಲೂ ಕ್ರಿಕೆಟ್ ನ ಬಹುದೊಡ್ಡ ಅಭಿಮಾನಿಯಾಗಿದ್ದರೆ
ತನ್ನ ಮಗನಿಗೂ ಕ್ರಿಕೆಟ್ ನಲ್ಲಿ ಆಸಕ್ತಿಯನ್ನು ಕಂಡು ಮಗನಿಗೆ ಕ್ರಿಕೆಟ್ ನಲ್ಲಿ ಬೆಳೆಯಲು ಬೇಕಾದ ಎಲ್ಲಾ ತರಹದ ಸುಪೋರ್ಟ್ ನ್ನು ತಂದೆ ನೀಡುತ್ತಾರೆ. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಅವರ ಕುಟುಂಬವೇ ಬೆಂಗಳೂರಿಗೆ ಶಿಫ್ಟ್ ಆಗಿ ನೆಲೆಸುತ್ತದೆ.