ಉಪ್ಪಿನಂಗಡಿ : ಬಾಳ ಪಯಣದಲ್ಲಿ ಎದುರಾದ ಕ್ಯಾನ್ಸರ್ ನ್ನು ಗೆಲ್ಲಲು ಶ್ರಾವ್ಯಳಿಗೆ ಬೇಕಿದೆ ಸಹೃದಯಿ ದಾನಿಗಳ ನೆರವು.

 

 

 

        ಕಷ್ಟಗಳು ಯಾರನ್ನು ಗುರುತಿಸಿಕೊಂಡು ಬರುವುದಿಲ್ಲ. ಆದರೆ ಬರುವ ಕಷ್ಟಗಳೆಲ್ಲ ಎಂದೂ ಶಾಶ್ವತವಲ್ಲ. ಕಷ್ಟಗಳ ಕತ್ತಲೆ ಕಳೆದು ಬೆಳಕು ಮೂಡಲೇಬೇಕು ಎಂಬ ಆಶಾಕಿರಣದೊಂದಿಗೆ ಇಂದು ನಾವು ಜೀವಿಸಬೇಕು. ಹೌದು ಸ್ನೇಹಿತರೇ ನೀವು ನೋಡಿರಬಹುದು ತನಗಿಂತ ಭಾರವಾದ ವಸ್ತುವನ್ನು ಇರುವೆ ಸಾಗಿಸಬೇಕಾದರೆ ತನ್ನ ಎಲ್ಲಾ ಸಂಗಡಿಗರನ್ನು ಒಡಗೊಂಡು ಒಟ್ಟಾಗಿ ಸಾಗಿಸುತ್ತವೆ. ಇದು ಸಹಕಾರಕ್ಕೆ ಸರ್ವ ಶ್ರೇಷ್ಠ ಉದಾಹರಣೆ ಎಂದರೆ ತಪ್ಪಾಗಲಾರದು. ಕಷ್ಟದಲ್ಲಿ ಯಾರೇ ಇರಲಿ ಅವರಿಗೆ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.

        ಈಕೆಯ ಹೆಸರು ಶ್ರಾವ್ಯ ಜೆ.ಎಂ ಅಂತಿಮ ಪದವಿ ವಿದ್ಯಾರ್ಥಿನಿ. ಇನ್ನೇನು ಕಾಲೇಜು ಜೀವನ ಮುಗಿಸಿಕೊಂಡು ವೃತ್ತಿ ಜೀವನದ ಕಡೆ ಹೆಜ್ಜೆ ಇಡಬೇಕು ಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡ ಹುಡುಗಿ ವಿಧಿಯ ಕ್ರೂರ ಪರೀಕ್ಷೆ ಕ್ಯಾನ್ಸರನ್ನು  ಎದುರಿಸುವ ಸವಾಲನ್ನು ಮೆಟ್ಟಿ ನಿಲ್ಲಬೇಕಾದ ಪರಿಸ್ಥಿತಿಗೆ ಬಂದು ನಿಲ್ಲುತ್ತಾಳೆ. ಆದರೆ ಅವಳಿಗೂ ಗೊತ್ತು ನಮಗೂ ಗೊತ್ತು ಜೀವನದ ಅದೆಷ್ಟೋ ಕಠಿಣ ಪರೀಕ್ಷೆಗಳನ್ನು ಎದುರಿಸಿದ ಶ್ರಾವ್ಯಳಿಗೆ ವಿಧಿಯ ಈ ಪರೀಕ್ಷೆ ತನ್ನನ್ನು ಗೆಲ್ಲುವುದರಿಂದ ಖಂಡಿತಾ ನಿಲ್ಲಿಸದು ಎಂದು. ಮತ್ತು ಖಂಡಿತ ಗೆದ್ದೇ ಗೆಲ್ಲುತ್ತಾಳೆ.

ಸ್ನೇಹಿತರೆ, ಇವಳು ಗೆಲ್ಲಲು ಇವಳ ಪ್ರಯತ್ನದೊಂದಿಗೆ ನಮ್ಮ ನಿಮ್ಮೆಲ್ಲರ ಸಹಕಾರ ಅತೀ ಅಗತ್ಯ.

        ಇವರದು ಬಡ ಕುಟುಂಬ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾಯರಡ್ಕ ಜನತಾ ಕಾಲೋನಿ ನಿವಾಸಿ ಶ್ರೀ ಜನಾರ್ಧನ ಪೂಜಾರಿ ಮತ್ತು ಶ್ರೀಮತಿ ರೇವತಿ ದಂಪತಿ ಪುತ್ರಿ ಶ್ರಾವ್ಯ ಉಪ್ಪಿನಂಗಡಿಯ ಸರಕಾರೀ ಕಾಲೇಜಿನಲ್ಲಿ ಓದುತ್ತಿದ್ದಾಳೆ.

        ಮಾರಕ ಕಾಯಿಲೆ ಕ್ಯಾನ್ಸರ್ ನೊಂದಿಗಿನ ಹೋರಾಟದಲ್ಲಿ ಈಕೆಯ  ಕುಟುಂಬ ಈಗಾಗಲೇ 5 ಲಕ್ಷದವರೆಗೆ ಹಣ ವ್ಯಯಿಸಿದ್ದಾರೆ. ಬಡ ಕುಟುಂಬವಾದ್ದರಿಂದ ಇನ್ನು ಹಣ ಹೊಂದಿಸಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 10 ರಿಂದ 15 ಲಕ್ಷದವರೆಗೂ ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇಷ್ಟೆಲ್ಲಾ ಖರ್ಚು ಮಾಡುವಷ್ಟು ಇವರಲ್ಲಿ ತಾಕತ್ತು ಇಲ್ಲದಿರುವಿದರಿಂದ ದಾನಿಗಳ ನೆರವು ಯಾಚಿಸಿದ್ದಾರೆ.

        ದಯವಿಟ್ಟು ಸಹೃದಯಿ ದಾನಿಗಳು ಈ ಬಡ ಕುಟುಂಬದ ಬೆಳಕು ಉಳಿಸಲು ತಮ್ಮಿoದ ಸಾಧ್ಯವಾದಷ್ಟು ಧನ ಸಹಾಯ ಮಾಡಬೇಕಾಗಿ ಈ ಮೂಲಕ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಕೆಲವು ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ತಮ್ಮ ವಾಟ್ಸಾಪ್ ಗ್ರೂಪ್ ಮುಖಾಂತರ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿವೆ. ನಾವು ಸಹ ಇವರ ಜೊತೆ ಕೈ ಜೋಡಿಸಬೇಕಿದೆ.

        ಇಂದು ಪ್ರತಿಯೊಬ್ಬರ ಮೊಬೈಲ್ನಲ್ಲಿಯೂ ವಾಟ್ಸಪ್ಪ್ ಇದೆ. ವಾಟ್ಸಾಪ್ ಲಿ ಇರುವ ಪ್ರತಿ ಗ್ರೂಪ್ ನಲ್ಲೂ ಕಡಿಮೆ ಅಂದರೂ 100 ಮಂದಿ ಸದಸ್ಯರಿರುತ್ತಾರೆ. ಅಂತ 10 ಗ್ರೂಪ್ ಗೂ ಕಳುಹಿಸಿ ಮತ್ತು ಪ್ರತಿಯೊಬ್ಬರು ಇಂತಿಷ್ಟು ಸಹಾಯ ಮಾಡುವ ಮುಖಾಂತರ ಈ ಕುಟುಂಬಕ್ಕೆ ನೆರವಾಗೋಣ.

”ಸಹಾಯದ ಬದಲಾಗಿ ನಮಗೇನು ಬೇಡ ಕೇವಲ ಅವರ ಚೇತರಿಕೆಯ ನಗು ಸಾಕು. ಅಲ್ವಾ?”

 

ಇಲ್ಲಿ ಸಹೃದಯಿಗಳು ಧನ ಸಹಾಯ ಮಾಡಬೇಕಾದ ಬ್ಯಾಂಕ್ ವಿವರ ಕೊಡಲಾಗಿದೆ. 

ಅಥವಾ GooglePay ಕೂಡ ಮಾಡಬಹುದು

 

Account Holder Name:   Ms. Shravya 

Account Number:            70560100005133

Bank Name :                     Uppinangady

IFSC Code:                          BARB0VJUPPI

GooglePay Number:        9611560293 (Girish G T)

 

 

Contact Detail.

Revathi (Shravya Mother) – +91 8277403372

Girish G T (Shravya Cousin) – +91 9611560293

 

(Important: – Before Depositing the amount please check the beneficiary name twice (should be account holder name))

 

Leave a Comment