ಇನ್ನು ನೀವು ನಿಮ್ಮ ಹೃದಯ ಬಡಿತ ಮತ್ತು ಆಮ್ಲಜನಕ ಪ್ರಮಾಣವನ್ನು ಮೊಬೈಲ್ ನಲ್ಲಿಯೇ ಪರೀಕ್ಷಿಸಿಕೊಳ್ಳಬಹುದು : CarePlex Vitals

        ನೀವು ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಲು ಓಕ್ಸಿಮೀಟರ್ ಹುಡುಕುತ್ತಾ ಮೆಡಿಕಲ್ ಗಳಿಗೆ ಅಳೆದು ಸುಸ್ತಾಗಿದ್ದೀರಾ.? ಹಾಗಿದ್ದಲ್ಲಿ ನಿಮಗೊಂದು ಶುಭ ಸಮಾಚಾರ ಇದೆ. ಹೌದು ನೀವು ಇನ್ನು ಮೇಲೆ ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಿಸಿಕೊಳ್ಳಲು ಒಕ್ಸಿಮೀಟರ್ ಬಳಸಬೇಕಾಗಿಲ್ಲ.

        ನಿಮ್ಮ ಮೊಬೈಲ್ ಬಳಸಿಕೊಂಡು ತಪಾಸಣೆ ಮಾಡಿಸಿಕೊಳ್ಳಬಹುದು. ಹೌದು ನಿಮ್ಮ ಮೊಬೈಲ್ ನಲ್ಲಿ ಒಂದು App ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಒಕ್ಸಿಜೆನ್ ಪ್ರಮಾಣ ಮಾತ್ರವಲ್ಲದೆ ಹೃದಯ ಬಡಿತವನ್ನೂ ನೀವು ನೋಡಿಕೊಳ್ಳಬಹುದು.  ಆ App ನ ಹೆಸರು CarePlex Vitals.

        ಈ App ಕೇರ್ ನೌ ಹೆಲ್ತ್ಕೇರ್ ಅಭಿವೃದ್ಧಿ ಪಡಿಸಿದ್ದು ಪ್ರಾಯೋಗಿಕವಾಗಿ ಪ್ರಮಾಣೀಕರಿಸಲಾಗಿದೆ. ಆಪ್ಪ್ ನ ಅಧಿಕೃತ ಜಾಲತಾಣದಲ್ಲಿ ಇರುವ ಮಾಹಿತಿ ಪ್ರಕಾರ ನೂರಕ್ಕೂ ಅಧಿಕ ಕ್ಲೈoಟ್ಸ್  ಜೊತೆಗೂಡಿದ್ದೂ ಸಾವಿರಕ್ಕೂ ಅಧಿಕ ರೋಗಿಗಳನ್ನು ಪರೀಕ್ಷೆ ಮಾಡಿದ ನಂತರ ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಲಾಗಿದೆ.

ನಿಮ್ಮ ಸಿಂಪಲ್ ವಿವರಣೆಯನ್ನು ನೀಡುವ ಮುಖಾಂತರ ಈ ಅಪ್ಲಿಕೇಶನ್ ನ್ನು ನೀವು ಬಳಸಿಕೊಳ್ಳಬಹುದು.

How to Download: 

  • ಮೊದಲು ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
  • ನಂತರ ರಿಜಿಸ್ಟರ್ ಮಾಡಿಕೊಳ್ಳಿ
  • ನಿಮ್ಮ ಇಮೇಲ್ ವಿಳಾಸ, ಹುಟ್ಟಿದ ದಿನಾಂಕ, ದೇಶ ಮತ್ತು ಹೊಸ ಫಾಸ್ವರ್ಡ್ ಹಾಕುವ ಮುಖಾಂತರ ರಿಜಿಸ್ಟರ್ ಆಗಿ.
  • ನಿಮ್ಮ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.

 

 

ಬಳಸುವ ವಿಧಾನ:

  • ನಿಮ್ಮ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.
  • ನಂತರ Record Vitals ಗೆ ಒತ್ತಿ
  • Start Scan ಕ್ಲಿಕ್ ಮಾಡಿ
  • ನಿಮ್ಮ ಮೊಬೈಲ್ ನ ಹಿಂದಿನ ಕ್ಯಾಮರ ಮತ್ತು ಫ್ಲಾಶ್ ಲೈಟ್ ಓಪನ್ ಆಗುತ್ತದೆ.
  • ನೀವು  ಫ್ಲಾಶ್ ಲೈಟ್ ಮತ್ತು ಕ್ಯಾಮರಾ ಒಟ್ಟಿಗೆ ಮುಚ್ಚುವಂತೆ ನಿಮ್ಮ ತೋರುಬೆರಳನ್ನು ಇಡಬೇಕು.
  • ಅವಾಗ Signal Strength ಸ್ಟ್ರಾಂಗ್ ಅಂತ ತೋರಿಸಬೇಕು.
  • ಅವಾಗ ನಿಮ್ಮ ದೇಹದ ಆಮ್ಲಜನಕದ ಪ್ರಮಾಣ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣ ಅಳೆಯಲು ಪ್ರಾರಂಭವಾಗುತ್ತದೆ.
  • ನಿಮ್ಮ ಫಲಿತಾಂಶ ಬರುವವರೆಗೂ ನಿಮ್ಮ ತೋರುಬೆರಳನ್ನು ತೆಗೆಯಬಾರದು.
  • 3 ರಿಂದ 5 ಸೆಕುಂಡುಗಳ ಕಾಲದಲ್ಲಿ ನಿಮ್ಮ ಫಲಿತಾಂಶ ಸಿದ್ದವಾಗಿರುತ್ತದೆ.

ಅಪ್ಲಿಕೇಶನ್ ಡೌನ್ಲೋಡ್ ಇಲ್ಲಿ ಮಾಡಿ  – Download App

 

 

ವಿಶೇಷ ಸೂಚನೆ: 

        ನಾವು ಒಂದು ವಿಚಾರ ನೆನಪಿಟ್ಟುಕೊಳ್ಳಬೇಕಾಗುತ್ತದೆ. ದಯವಿಟ್ಟು ಯಾವುದೇ ಗಂಭೀರ ಸ್ಥಿತಿಯುಳ್ಳವರು ಮತ್ತು ವಿಷಮ ಪರಿಸ್ಥಿತಿ  ಎದುರಿಸುವ  ಸಮಯದಲ್ಲಿ ಇಂತಹ ಆಪ್ ಗಳನ್ನ ಬಳಸುವ ಬದಲು ನೇರ ವೈದ್ಯರನ್ನು  ಅಥವಾ  ಆಸ್ಪತ್ರೆಯನ್ನು ಭೇಟಿಯಾಗುವುದು ಉತ್ತಮ.  ಮತ್ತು ಯಾವುದೇ ಗಂಭೀರ ಕಾಯಿಲೆ ಇರುವವರು ವೈದ್ಯರು ಸೂಚಿಸುವ ಉಪಕರಣವನ್ನೇ ಬಳಸುವುದು ಒಳಿತು. 

        ಮೊಬೈಲ್ ಆಪ್ ಕೇವಲ ತ್ವರಿತ ಪರ್ಯಾಯವಾಗಬಲ್ಲದೇ ಹೊರತು, ಶಾಶ್ವತ ಪರಿಹಾರವಲ್ಲ.  ಆರೋಗ್ಯದ ಕುರಿತಾದ ಯಾವುದೇ ಮೊಬೈಲ್ ಅಪ್ಲಿಕೇಷನ್ಗಳನ್ನು ಮತ್ತು  ವೈದ್ಯಕೀಯವಾಗಿ ಪ್ರಮಾಣೀಕೃತವಾದ ವೈದ್ಯಕೀಯ ಸಾಧನಗಳನ್ನು  ಯಾವುದೇ ಕಾರಣಕ್ಕೂ ಸಮಾನವಾಗಿ ಪರಿಗಣಿಸಬಾರದು. 

 

 

 

 

 

 

Tags – CarePlex Vitals, Oximeter, Oxygen Level, Respitary level, Corona pandemic, Covid-19, 2nd wave, maskUpIndia, covaxin, covishield, 

 

 

 

 

 

Leave a Comment