ಜೀವನಕ್ಕೆ ಆಧಾರವಾಗಿದ್ದ ಮಗ ಹಾಸಿಗೆ ಹಿಡಿದಿದ್ದಾನೆ. ದುಡಿಯುತ್ತಿದ್ದ ಕೈಗಳು ಮುಪ್ಪಾಗಿ ಅಸಹಾಯಕವಾಗಿ ನಿಂತಿವೆ. ಆಪತ್ತಲ್ಲಿ ನೆರವಾಗಬೇಕಿದ್ದ ಸಂಬಂಧಿಕರು ಸೋತು ಕೈಚೆಲ್ಲಿದ್ದಾರೆ. ಎರಡು ಹೊತ್ತು ಬೇಡ, ಕನಿಷ್ಠ ಒಂದು ಹೊತ್ತು ಊಟ ಸಿಕ್ಕರೂ ತೃಪ್ತಿ ಎನ್ನುವ ಈ ಹಿರಿ ಜೀವಗಳಿಗೆ ಮತ್ತು ಹಾಸಿಗೆ ಹಿಡಿದಿರುವ ಮಗನ ಹೊಟ್ಟೆ ತಣಿಸುವ ಪುಣ್ಯ ಕಾರ್ಯ ನಮ್ಮಿಂದ ಆಗಬೇಕಿದೆ.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯಾರಿನ ಪಿಜಿನ ಮುಗೇರ ರವರ ಪುತ್ರ ದೀಕ್ಷಿತ್ ಇಂದು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಗೆಳೆಯರ ಜೊತೆ ಹರಟೆ ಹೊಡೆಯಬೇಕೆಗಿದ್ದ ಹುಡುಗ, ದುಡಿದು ತಂದೆ ತಾಯಿಯನ್ನು ಸಾಕಬೇಕಿದ್ದ ಮಗ ಇಂದು ಆಸ್ಪತ್ರೆಯ ಹಾಸಿಗೆಯಲ್ಲಿ ಅಸಹಾಯಕನಾಗಿ ಮಲಗಿ ದಾನಿಗಳ ನೆರವಿನ ಹಸ್ತಕ್ಕೆ ಕಾಯುತ್ತಾ ಕಣ್ಣೀರಿಡುತ್ತೀದ್ದಾನೆ.
ಅನೊರೋಗ್ಯದಿಂದ ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದ ಸಂಧರ್ಭದಲ್ಲಿ ನೆರೆಹೊರೆಯ ಒಬ್ಬರು ಆಪತ್ಬಾಂಧವರು ಸರಿಯಾದ ಸಮಯಕ್ಕೆ ಬಂದು, ಹೊರಗಿನ ಜಗತ್ತಿನ ಬಗ್ಗೆ ಅಷ್ಟೇನು ಅರಿವಿಲ್ಲದ ವೃದ್ಧ ತಂದೆ ತಾಯಿಯ ಜೊತೆ ನೆರವಿಗೆ ನಿಂತು ಸಹಾಯದ ಭರವಸೆ ನೀಡಿ ಆ ಹುಡುಗನನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ. ನಂತರ ದೀಕ್ಷಿತ್ ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗುತ್ತದೆ. ವೈದ್ಯರು ಹುಡುಗ ಲಿವರ್ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದಾನೆ ಎಂದು ಹೇಳಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಆಗಬೇಕೆಂದು ತಿಳಿಸಿರುತ್ತಾರೆ. ಸದ್ಯ ಚಿಕಿತ್ಸೆ ನಡೆಯುತ್ತಿದ್ದು, ಗುಣಪಡಿಸುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.
ಆಸ್ಪತ್ರೆಯಲ್ಲಿ ತಿಂಗಳುಗಳೇ ಕಳೆದಿದ್ದು, ವೃದ್ಧ ತಂದೆ ತಾಯಿಗೆ ಮಗನ ಆರೈಕೆಯೇ ಒಂದು ದೊಡ್ಡ ಸವಾಲಾಗಿ ನಿಂತಿದೆ. ಕಣಿಯಾರಿನಿಂದ ಮಂಗಳೂರಿಗೆ ಹೋಗಿ ಬರಲು ಸುಮಾರು 170 ಕಿಲೋಮೀಟರು ಇದ್ದು ಇದರ ಖರ್ಚು ಮತ್ತು ದುಡಿಯ ಮಗ ಆಸ್ಪತ್ರೆ ಸೇರಿರುವುದರಿಂದ ದೈನಂದಿನ ಹೊಟ್ಟೆ ಪಾಡು ಜೊತೆಗೆ ಕೆಲವೊಂದು ಔಷಧೀಯ ಖರ್ಚು ಎಲ್ಲವೂ ಇಂದು ಹೊರಳಾದ ಭಾರವಾಗಿ ನಿಂತಿದೆ. ಮಗನ ಸಲುವಾಗಿ ಓಡಾಡುವ ವೃದ್ಧ ತಂದೆಗೆ ಯಾವುದೇ ವಿದ್ಯಾಭ್ಯಾಸ ಇಲ್ಲ, ಮೊಬೈಲ್ ನ ಜ್ಞಾನ ಇಲ್ಲ, ದೂರದೂರಿನ ಪರಿಚಯ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಿಮ್ಮಂತಹವರೇ ಇವರಿಗೆ ನೆರವಾಗಬೇಕೇ ಹೊರತು ಇನ್ಯಾರು ಹೇಳಿ ಆಲ್ವಾ.
ಸರಕಾರಿ ಆಸ್ಪತ್ರೆಯಾದ್ದರಿಂದ ಚಿಕಿತ್ಸೆಯ ವೆಚ್ಚದ ಬಗ್ಗೆ ಚಿಂತೆ ಇರುವುದಿಲ್ಲ, ಆದರೆ ಕೆಲವೊಂದು ಔಷಧಿ ಮತ್ತು ಪ್ರಯಾಣದ ವೆಚ್ಚ, ಹಾಗೂ ದೈನಂದಿನ ಹೊಟ್ಟೆ ಪಾಡಿನ ಖರ್ಚು, ಚಿಕಿತ್ಸೆಗಾಗಿ ಮಾಡಿದ ಸಾಲ ಇವೆಲ್ಲಾ ಮಾತ್ರ ಇವರಿಗೆ ಈಗ ಭರಿಸಲಾರದ ಹೊರೆಯಾಗಿದೆ ಎಂದರೆ ತಪ್ಪಾಗಲಾರದು.
ಈ ಬಡ ಕುಟುಂಬಕ್ಕೆ ಇಂದು ನಮ್ಮ ನೆರವಿನ ಹಸ್ತ ಬೇಕಿದೆ. ದೀಕ್ಷಿತ್ ಗುಣಮುಖ ಆಗುವವರೆಗೆ ಕನಿಷ್ಠ ಎರಡು ಹೊತ್ತಿನ ಊಟಕ್ಕಾದರೂ ವ್ಯವಸ್ಥೆ ಆಗುವಂತೆ ದಾನಿಗಳು ಅಲ್ಪ ಸ್ವಲ್ಪವಾದರೂ ಈ ಕೆಳಗೆ ಕೊಟ್ಟಿರುವ ಅಕೌಂಟ್ ಸಂಖ್ಯೆಗೆ ಧನ ಸಹಾಯ ಮಾಡಿದರೆ ಈ ಹಿರಿ ಜೀವಗಳು ಸ್ವಲ್ಪನಾದರೂ ನೆಮ್ಮದಿಯಿಂದ ಜೀವನ ಕಳೆಯಬಹುದು ಎಂಬ ತೃಪ್ತಿ ನಮ್ಮದಾಗುತ್ತದೆ.
(Due to some reason Account Number and contact information have been removed. The Patient has recovered)
ದೀಕ್ಷಿತ್ ಗೆ ಸಂಬಂಧ ಪಟ್ಟ ಚಿತ್ರಗಳು
(ವಿ. ಸೂ: ದೀಕ್ಷಿತ್ ಗುಣಮುಖ ಆದ ನಂತರ ಈ ಅಕೌಂಟ್ ನಂಬರ್ ಅನ್ನು ಈ ಲೇಖನದಿಂದ ಅಳಿಸಿ ಹಾಕಲಾಗುವುದು)