ಧರ್ಮಸ್ಥಳ ಪರ ಪ್ರತಿಭಟನೆಯಲ್ಲಿ ಸೌಜನ್ಯಳಿಗೆ ನ್ಯಾಯ ಕೇಳಲು ಹೋದ ಸೌಜನ್ಯಳ ತಾಯಿ ಮತ್ತು ಸಹೋದರನಿಗೆ ಹಲ್ಲೆ. 

ಧರ್ಮಸ್ಥಳ ಪರ ಪ್ರತಿಭಟನೆಯಲ್ಲಿ ಸೌಜನ್ಯಳಿಗೆ ನ್ಯಾಯ ಕೇಳಲು ಹೋದ ಸೌಜನ್ಯಳ ತಾಯಿ ಮತ್ತು ಸಹೋದರನಿಗೆ ಹಲ್ಲೆ. 

ಧರ್ಮಸ್ಥಳದಲ್ಲಿ ಇಂದು ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಸಂಬಂಧ ಧರ್ಮಸ್ಥಳದ ಮತ್ತು ಧರ್ಮಾಧಿಕಾರಿಯ ವಿರುದ್ಧ ಕೇಳಿಬರುತ್ತಿರುವ ಟೀಕೆ, ಆರೋಪ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಧರ್ಮಸ್ಥಳ ಭಕ್ತವೃಂದ ಮತ್ತು ಧರ್ಮಸ್ಥಳದ ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆ ನಡೆಸಿದವು. ಇದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಪರ ನಿಂತು, ಅವರ ವಿರುದ್ಧ ಅವಹೇಳಕಾರಿ ಹೇಳಿಕೆ ಕೊಡುವವರ ವಿರುದ್ಧವಾಗಿದ್ದು, ಜೊತೆಗೆ ಸೌಜನ್ಯಳ ಮರು ತನಿಖೆ ಆಗಬೇಕೆಂದು ಬೇಡಿಕೆಗಾಗಿತ್ತು. ಆದರೆ ಈ ಪ್ರತಿಭಟನೆಯಲ್ಲಿ ಆಶ್ಚರ್ಯ ಎಂಬಂತೆ ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಸೌಜನ್ಯಳ ಸಹೋದರ ಸಹ ಭಾಗವಹಿಸಿದ್ದು, ಅವರ ಮೇಲೆ ಸೇರಿದ್ದ ಪ್ರತಿಭಟನಾಕಾರರು ಹಲ್ಲೆ ಮಾಡಲು ಮುಂದಾಗಿದ್ದು, ಸೌಜನ್ಯಳ ಸಹೋದರನ ಕೊರಳ ಪಟ್ಟಿ ಹಿಡಿದೆಳೆದಿದ್ದಾರೆ. 

 

ನಿಜವಾಗಿ ನ್ಯಾಯ ಸಿಗಬೇಕಾಗಿದ್ದ ಸೌಜನ್ಯ ಳ ಕುಟುಂಬದವರ ಮೇಲೆಯೇ ಹಲ್ಲೆ ಮಾಡಿದ್ದೂ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೇ ಪ್ರತಿಭಟನೆಯಲ್ಲಿ ಬೆಳ್ತಂಗಡಿ ಶಾಶಕ ಹರೀಶ್ ಪೂಂಜಾ, ಬಿಕೆ ಹರಿಪ್ರಸಾದ್ ಮತ್ತಿತರರು ಸಹ ಭಾಗಿಯಾಗಿದ್ದರು.  ಈ ಪ್ರತಿಭಟನೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಮ ಗೌಡ ಅವರು ವೇದಿಕೆ ಮುಂಭಾಗ ಬಂದು ಮಗಳಿಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿದಾಗ, ಧರ್ಮಾಧಿಕಾರಿಯ ಬೆಂಬಲಿಗನೊಬ್ಬ ಸೌಜನ್ಯಳ ತಾಯಿ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ  ಮಾತ್ರವಲ್ಲದೆ, ಜಯರಾಮ ಗೌಡನ ಅಂಗಿಯ ಕಾಲರ್ ಪಟ್ಟಿ ಹಿಡಿದು ಎಳೆಯುತ್ತಾನೆ. ಮತ್ತು ಆತನಿಗೆ ಬೆದರಿಕೆಯೊಡ್ಡುತ್ತಾನೆ. 

 

ನಂತರ ಮಾತಾಡಿದ ಸೌಜನ್ಯಳ ತಾಯಿ ಈ ಹೋರಾಟ ನನ್ನ ಮಗಳ ಸಾವಿಗೆ ನ್ಯಾಯ ಬೇಕು. ನಮ್ಮ ಕುಟುಂಬ ಧರ್ಮಸ್ಥಳದ ವಿರುದ್ಧ ಅಲ್ಲ, ನಮ್ಮ ಹೋರಾಟ ಮಗಳನ್ನು ಹತ್ಯೆಗೈದ ಆರೋಪಿಗಳ ವಿರುದ್ಧ. ಅವರಿಗೆ ಶಿಕ್ಷೆಯಾಗಬೇಕು. ಇವತ್ತಿನ ಹೋರಾಟ ನನ್ನ ಮಗಳ ಪರವಾಗಿಲ್ಲ. ಯಾರು ನನ್ನ ಮಗಳ ಪರ ನ್ಯಾಯಕ್ಕಾಗಿ ಪ್ಲೇ ಕಾರ್ಡ್ ಹಿಡಿದಿಲ್ಲ, ಘೋಷಣೆ ಕೂಗಿಲ್ಲ. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಇವತ್ತಿನ ಪ್ರತಿಭಟನೆಯನ್ನು ಮಾಡಲಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರು.  

 

Leave a Comment