ಬಹಳ ಕುತೂಹಲ ಕೆರಳಿಸಿದ ನೂರಾರು ಮೃತದೇಹಗಳ ಶೋಧ ಕಾರ್ಯ ಆರನೇ ದಿನ ತಲುಪಿದ್ದು, ನಿಗೂಢ ವ್ಯಕ್ತಿ ಗುರುತಿಸಿದ ಈವರೆಗೆ ಒಟ್ಟು ಹನ್ನೊಂದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ವಿಶೇಷ ತನಿಖಾ ತಂಡ ನಡೆಸುತ್ತಿರುವ ಶೋಧ ಕಾರ್ಯಕ್ಕೆ ನಿನ್ನೆ ಅಂದರೆ ಸೋಮವಾರ ದೊಡ್ಡದೊಂದು ತಿರುವು ಸಿಕ್ಕಿದೆ. ವಿಶೇಷವಾಗಿ ಆರನೇ ದಿನದ ಕಾರ್ಯಾಚರಣೆಯಲ್ಲಿ ನಿಗೂಢ ವ್ಯಕ್ತಿ ಸೂಚಿಸಿದ ಪಾಯಿಂಟ್ ನಂಬರ್ ಹನ್ನೊಂದರ ಬದಲು ಅಲ್ಲಿಯೇ ಹತ್ತಿರದ ಹೊಸ ಸ್ಥಳದಲ್ಲಿ ಮೃತದೇಹದ ಅವಶೇಷಗಳು ದೊರೆತಿವೆ. ಜೊತೆಗೆ ಆಳದಲ್ಲಿ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದ್ದು, ಹತ್ತಿರಾ ಹಗ್ಗ ಮತ್ತು ಕೆಲವು ವಸ್ತುಗಳು ಕಂಡು ಬಂದಿವೆ. ಇದರಿಂದ ಈವರೆಗೆ ಒಟ್ಟು ನಾಲ್ಕು ಮೃತದೇಹದ ಅವಶೇಷಗಳು ಪತ್ತೆಯಾದಂತಿದೆ.
ಇದರಿಂದ ಇನ್ನಷ್ಟು ಸಂಶಯಗಳು ಮೂಡಿದ್ದು, ಈಗಿರುವ ಪ್ರಕರಣಕ್ಕೆ ಬಲಬಂದಂತಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಳಲಾಗಿದೆ ಎನ್ನಲಾದ ಮೃತದೇಹಗಳನ್ನು ಪತ್ತೆಹಚ್ಚುವ ಪ್ರಯತ್ನ ಸೋಮವಾರವೂ ಮುಂದುವರಿಯಿತು. ಇಲ್ಲಿಯವರೆಗೆ, ಸಾಕ್ಷಿ ದೂರುದಾರ ತೋರಿಸಿದ 10 ಸ್ಥಳಗಳನ್ನು ಅಧಿಕಾರಿಗಳು ಕ್ರಮವಾಗಿ ಅಗೆದು ಪರಿಶೀಲಿಸಿದ್ದರು. ಇಂದು 11ನೇ ಸ್ಥಳದಲ್ಲಿ ಉತ್ಖನನ ನಡೆಸುವ ನಿರೀಕ್ಷೆಯಿತ್ತು.
- ವರಮಹಾಲಕ್ಷ್ಮೀ ಪೂಜೆ 2025: ದಿನಾಂಕ, ಮಹತ್ವ ಮತ್ತು ಆಚರಣೆಗಳು
- ಹಳೆಯ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ BoycottMaldives ಟ್ರೆಂಡ್
- ಬುಡಕಟ್ಟು ಜನಾಂಗದ ಐಕಾನ್ ಶಿಬು ಸೊರೆನ್ ನಿಧನ: ಗೌರವಾರ್ಪಣೆ ಸಲ್ಲಿಸಿದ ಪ್ರಧಾನಿ ಮೋದಿ
- ರಾಜಕೀಯ ಬಿರುಗಾಳಿಗೆ ಕಾರಣವಾದ ರಾಹುಲ್ ಗಾಂಧಿ-ಚೀನಾ ಹೇಳಿಕೆ
- ನೆಟ್ಟಿಗರ ಮನಸ್ಸು ಗೆದ್ದ ಭಾರತೀಯ ಪುರುಷನನ್ನು ಮದುವೆಯಾಗಲು ರಷ್ಯಾದ ಮಹಿಳೆಯ ಕಾರಣಗಳು
- ಧರ್ಮಸ್ಥಳ ಕೇಸ್‌ಗೆ ಬಿಗ್ ಟ್ವಿಸ್ಟ್, 6ನೇ ದಿನ ಮತ್ತೊಂದು ಜಾಗದಲ್ಲಿ ಮೃತದೇಹದ ಅವಶೇಷಗಳು ಪತ್ತೆ