ಮೋದಿಗೆ ಹೋಗಿ ಹೇಳು ಎಂದಿದ್ದ ಉಗ್ರ ಹಾಶಿಮ್ ಮೂಸಾ ಮಟಾಷ್. 

Terrorist Hasim Moosa Encountered: ಇತ್ತೀಚಿಗೆ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಉಗ್ರ ಹಾಸಿಂ ಮೂಸಾ ನಿನ್ನೆ ನಡೆದ ಆಪರೇಷನ್ ಮಹದೇವ್ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಯ ಎನ್ಕೌಂಟರ್ ಗೆ ಬಲಿಯಾಗಿದ್ದಾನೆ. ಅವನ ಜೊತೆ ಇದ್ದ ಇನ್ನುಳಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪ್ರವಾಸಿಗರನ್ನು ಘೇರಾವ್ ಮಾಡಿ ಧರ್ಮ ಕೇಳಿ ಮೋದಿಗೆ ಹೋಗಿ ಹೇಳು ಎಂದು ಗಂಡಸರನ್ನು ಅಂದರೆ ಅಲ್ಲಿ ಇದ್ದಂತಹ ಮಹಿಳೆಯರ ಗಂಡಂದಿರನ್ನು ಸಾಯಿಸಿ ಅಟ್ಟಹಾಸ ಮೆರೆದಿದ್ದ ಈ ಭಯೋತ್ದಕರ ಕೃತ್ಯ ಭಾರತ ಪಾಕಿಸ್ತಾನ ಯುದ್ಧಕ್ಕೆ ಎಡೆ ಮಾಡಿತ್ತು.

Terrorist Hasim Moosa Encountered

ಉಗ್ರಗಾಮಿಗಳನ್ನು ಪೋಷಿಸುತ್ತಿದ್ದ ಶತ್ರು ರಾಷ್ಟ್ಟ್ರಕ್ಕೆ ಸರಿಯಾದ ಪಾಠ ಕಲಿಸುವಲ್ಲಿ ಭಾರತ ಯಶಸ್ವಿಯಾಗಿತ್ತಾದರೂ ಪೆಹಲ್ಗಾಮ್ ನಲ್ಲಿ ಅಟ್ಟಹಾಸ ಮೆರೆದಿದ್ದ ಭಯೋತ್ಪಾದಕರು ಇಲ್ಲಿ ತನಕ ತಲೆಮರಿಸಿಕೊಂಡು ಭಾರತಕ್ಕೆ ತಲೆನೋವು ಆಗಿದ್ದರು. ಆದರೆ ನಿನ್ನೆ ನಡೆದ ಭಾರತೀಯ ಸೇನೆಯ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎಂಬ ಉಗ್ರನನ್ನು ಶ್ರೀನಗರ ಬಳಿಯ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಭಾರತೀಯ ಪಡೆಗಳು ನಡೆಸಿದ ಭಯೋತ್ಪಾದನಾ ನಿಗ್ರಹ ದಾಳಿಯಲ್ಲಿ ಗುಂಡು ಹಾರಿಸಲ್ಪಟ್ಟ ಮೂವರು ಟಾಪ್ ಭಯೋತ್ಪಾದಕರಲ್ಲಿ ಮೂಸಾ ಕೂಡ ಒಬ್ಬ. ಈತನಿಗೆ ಸುಲೇಮಾನ್ ಮೂಸಾ ಎಂಬ ಹೆಸರು ಕೂಡ ಇದೆ. ಈತನ ಜೊತೆಗೆ ಇತರ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಹೊಡೆದುರುಳಿಸಿವೆ.

Read Also

Leave a Comment