TCS Recession: ಟಿಸಿಎಸ್(TCS) ಸಂಸ್ಥೆಯಿಂದ 12,000 ಉದ್ಯೋಗಿಗಳಿಗೆ ಗೆಟ್-ಪಾಸ್ ! 

TCS Recession: ಭಾರತದ ಅತಿದೊಡ್ಡ ಐಟಿ ಕಂಪನಿ ಆದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS ), ಈ ವರ್ಷ ತನ್ನ ಉದ್ಯೋಗಿಗಳಲ್ಲಿ ಶೇಕಡಾ 2 ರಷ್ಟು ಉದ್ಯೋಗಿಗಳನ್ನು ಉದ್ಯೋಗದಿಂದ ವಜಾಗೊಳಿಸಲು ಯೋಜನೆ ಹಾಕುತ್ತಿದೆ ಕಂಪನಿ ಭಾನುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ತನ್ನ ಉದ್ಯೋಗಿಗಳ ಪ್ರಮಾಣವನ್ನು ಸುಮಾರು 12,000 ರಷ್ಟು ಕಡಿಮೆ ಮಾಡುವ ಕಂಪನಿಯ ಈ ನಿರ್ಧಾರವು ತನ್ನ ಜಾಗತಿಕ ಉದ್ಯೋಗಿಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಕಂಪನಿಯ ಈ ನಿರ್ಧಾರದಿಂದ ಹಲವು ಉದ್ಯೋಗಿಗಳ ಜೀವನಕ್ಕೆ ಅದರಲ್ಲೂ ಮಾಧ್ಯಮ ವರ್ಗದವರಿಗೆ ಹೆಚ್ಚು ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ. 

TCS Recession

ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ (AI) ತಾಂತ್ರಿಕ ಬದಲಾವಣೆಗಳು ಟಿಸಿಎಸ್ ವ್ಯವಹಾರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಯಲ್ಲಿ, ಟಾಟಾ ಸಮೂಹದ ಅಂಗಸಂಸ್ಥೆಯು 613,069 ಉದ್ಯೋಗಿಗಳನ್ನು ಹೊಂದಿತ್ತು. ಸದ್ಯ ಹೆಚ್ಚುತ್ತಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ತಂತ್ರಜ್ಞಾನವು ಕಂಪೆನಿಗಳಲ್ಲಿ ಹೆಚ್ಚಾಗಿ ಅಳವಡಿಸುತ್ತಿರುವುದರಿಂದ ಈ ನಿರ್ಧಾರಗಳು ಅನಿವಾರ್ಯತೆಯಾಗಿವೆ ಎಂದು ತಿಳಿಸಲಾಗಿದೆ. 

Read Also

Leave a Comment