ಕಾಮಿಡಿ ಜೊತೆ ಹಾರರ್, ಸುಲೋಚನ ಫ್ರಮ್ ಸೊಮೇಶ್ವರ(Su From So) ಸೂಪರ್

Su From So ಸಿನಿಮಾ ಸದ್ಯ ಕರ್ನಾಟಕದಾದ್ಯಂತ ಸಂಚಲನ ಮೂಡಿಸುತ್ತಿರುವ ಹೊಸಬರನ್ನೊಳಗೊಂಡ ಹಾಸ್ಯಭರಿತ ರಾಜ್ ಬಿ ಶೆಟ್ಟಿ ಸಹ ನಿರ್ಮಾಣದ ಮಂಗಳೂರು ಕನ್ನಡ ಮಿಶ್ರಿತ ಹೊಸ ಕನ್ನಡ ಸಿನಿಮಾ. ಕರ್ನಾಟಕದಾದ್ಯಂತ ಬಿಡುಗಡೆಗೊಂಡ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಶೋ ನೀಡುತ್ತಾ ಎಲ್ಲಾ ವರ್ಗದ ಜನರನ್ನು ಸೆಳೆಯುತ್ತ ಅದ್ಬುತ ಪ್ರತಿಕ್ರಿಯೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಷೋಗಳು ಸಹ ಜಾಸ್ತಿ ಆಗುತ್ತಿದೆ. ಸ್ಟಾರ್ ಗಿರಿಗಿಂತ ಕಥೆ ಮತ್ತು ಪಾತ್ರವೇ ಸಿನಿಮಾದ ಜೀವಾಳ ಎಂಬುದನ್ನು ಪ್ರೇಕ್ಷಕರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಎರಡು ವಾರಕ್ಕೆ ಮುಂಚೆ ಬಿಡುಗಡೆಯಾದ ತುಳು ಸಿನಿಮಾ ಧರ್ಮಚಾವಡಿ ತನ್ನ ವಿಶೇಷ ಕಥೆ ಮತ್ತು ಪ್ರಸ್ತುತ ಪಡಿಸಿದ ರೀತಿ ಸಹ ಪ್ರಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಸದ್ಯ ಮೂರನೇ ವಾರಕ್ಕೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.  

ತುಳು ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಕಲಾವಿದ ಜೆಪಿ ತೂಮಿನಾಡು ಮೊದಲ ಬಾರಿಗೆ ಕನ್ನಡದ ಸಿನಿಮಾಗೆ ಕಥೆ ಮತ್ತು ನಿರ್ದೇಶನ ಮಾಡಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ. ಇವರ ನಿರ್ದೇಶನದ ಸಿನಿಮಾ ಸು ಫ್ರಮ್ ಸೊ ತನ್ನ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸಿತ್ತು. ಸಿನಿಮಾದಲ್ಲಿ ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಾಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ಬಣ್ಣ ಹಚ್ಚಿ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸಹ ಒಂದು ಪಾತ್ರದಲ್ಲಿ ನಟಿಸಿದ್ದು ಸಿನಿಮಾಕ್ಕೆ ಇನ್ನಷ್ಟು ಜೀವ ಬಂದಂತಾಗಿದೆ.  

Su From So Movie Review

ಕಾಮಿಡಿ ಜೊತೆ ಹಾರರ್ ಟಚ್ ಕೊಟ್ಟು ಸಿನಿಮಾವನ್ನು ಆರಂಭದಿಂದ ಕೊನೆಯ ತನಕ ಎಲ್ಲಿಯೂ ಜನರಿಗೆ ಬೋರ್ ಆಗದಂತೆ ನಿರ್ದೇಶಕರು ಜನರನ್ನು ಸೀಟಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಅಲ್ಲಲ್ಲಿ ಉದ್ದೇಶಪೂರಕವಾಗಿ ಕಾಮಿಡಿ ತುರುಕಲು ಪ್ರಯತ್ನ ಪಡದೆ ಕಥೆಯಲ್ಲೇ ಕಾಮಿಡಿ ಚಿಮುಕಿ ಬರುವುದರಿಂದ ಜನರು ಇನ್ನಷ್ಟು ಇಷ್ಟ ಪಡಲು ಕಾರಣವಾಯಿತು. ಸಿನಿಮಾದ ಕಥೆ ರೋಚಕ ತಿರುವು ಪಡೆದುಕೊಳ್ಳುವುದೇ ಈ ಸಿನಿಮಾದ ಜೀವಾಳ. ಪ್ರತಿಯೊಬ್ಬರ ಅಭಿನಯವು ನೈಜವಾಗಿ ಮೂಡಿಬಂದಿದ್ದು, ಸಿನಿಮಾದ ಸಂಗೀತ ಮಾತ್ರ ಬೇರೆ ಲೆವೆಲ್ ಎಂದು ಪ್ರೇಕ್ಷಕರು ಕೊಂಡಾಡಿದ್ದಾರೆ.  

Leave a Comment