Su From So Collections: ಸು ಫ್ರಮ್ ಸೋ ಈವರೆಗಿನ ಕಲೆಕ್ಷನ್ ಎಷ್ಟು ಗೊತ್ತಾ?

Su From So Collections: ಬಿಡುಗಡೆಗೆ ಮುಂಚೆನೇ ಹವಾ ಕ್ರಿಯೇಟ್ ಮಾಡಿದ್ದ ಸು ಫ್ರಮ್ ಸೊ ಸಿನಿಮಾ, ಬಿಡುಗಡೆಯಾದ ದಿನದಿಂದ ಕರ್ನಾಟಕದ ಎಲ್ಲಾ ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಾ ಮುಂದೆ ಸಾಗುತ್ತಿದೆ. ದಿನದಿಂದ ದಿನಕ್ಕೆ ಷೋ ಗಳು ಜಾಸ್ತಿಯಾಗುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಾಗರವೇ ಚಿತ್ರಮಂದಿರದತ್ತ ಹರಿದು ಬರುತ್ತಿದೆ. ಅದರಂತೆ ಕಲೆಕ್ಷನ್ ಸಹ ಚಿತ್ರ ತಂಡ ಎನಿಸಿರುವುದಕ್ಕಿಂತ ಜಾಸ್ತಿನೇ ಆಗುತ್ತಿರುವುದು ಇನ್ನಿಲ್ಲದ ಖುಷಿ ಕೊಟ್ಟಿದೆ. ಬಹಳ ವರ್ಷಗಳ ನಂತರ ಕನ್ನಡ ಚಿತ್ರವೊಂದು ಈ ರೀತಿ ಚಿತ್ರಮಂದಿರವನ್ನು ಜನ ಸಾಗರದಿಂದ ಭರಿಸುತ್ತಿರುವುದು ವಿಶೇಷ. ಕನ್ನಡ ಚಿತ್ರವನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಉವಾಚ ಕೇಳುತ್ತಿರಬೇಕಾದರೆ ಬಂದ ಸಿನಿಮಾ ಸು ಫ್ರಮ್ ಸೊ ಜನರನ್ನು ಚಿತ್ರಮಂದಿರವನ್ನು ಬಿಟ್ಟು ಹೋಗಲು ಮನಸೇ ಮಾಡದ ಹಾಗೆ ಮಾಡಿದೆ. 

Su From So Collections

ಅಪ್ಪಟ ಕುಡ್ಲದ ಕಾಲವಿದರು ಮಾಡಿರುವ ಸು ಫ್ರಮ್ ಸೋ ಸೂಪರ್ ಮೂವಿ ಫ್ರಮ್ ಸೌತ್ ಪೀಪಲ್ ಎಂದು ಹೊಗಳುವ ಹಾಗೆ ಆಗಿರುವುದು ನಮ್ಮ ಕುಡ್ಲದವರಿಗೆ ಹೆಮ್ಮೆಯ ವಿಚಾರ. ಸದ್ಯ ಕಲೆಕ್ಷನ್ ನಲ್ಲಿ ಮನರಂಜನೆಯಲ್ಲಿ ಕಥೆಯಲ್ಲಿ ಕಾಮಿಡಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಕನ್ನಡ ಚಿತ್ರ ಜೂನಿಯರ್, ಎಕ್ಕ ಮುಂತಾದವಗಳ ದಾಖಲೆಯನ್ನು ಕೇವಲ ಮೂರ್ ದಿನದಲ್ಲಿ ಉಡೀಸ್ ಮಾಡಿದೆ. ಇವತ್ತಿನ ತನಕ ಇರುವ ಮಾಹಿತಿ ಪ್ರಕಾರ ,’ಸು ಫ್ರಮ್ ಸೋ’ ಮೊದಲ ದಿನ 78 ಲಕ್ಷ ರೂಪಾಯಿ, ಎರಡನೇ ದಿನ ಚಿತ್ರದ ಗಳಿಕೆ 2.17 ಕೋಟಿ ರೂಪಾಯಿ ಹಾಗೂ ಮೂರನೇ ದಿನವಾದ ಭಾನುವಾರ ಒಟ್ಟು 3.86 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಸು ಫ್ರಮ್ ಸೊ ಸಿನಿಮಾ ಬಿಡುಗಡೆಯಾದ ಮೂರು ದಿನಕ್ಕೆ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಚಿತ್ರ 7.82 ಕೋಟಿ ರೂಪಾಯಿ ಆಗಿದೆ. ಹಾಗೂ ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿದರೆ ಸರಿ ಸುಮಾರು 8 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Read Also

Leave a Comment