ಆಟ ಆಡುತ್ತಾ ವಿಷದ ನಾಗರಹಾವನ್ನು ಕಚ್ಚಿ ಸಾಯಿಸಿದ 1 ವರ್ಷದ ಮಗು

ಸಾಮಾನ್ಯವಾಗಿ ಮಳೆಗಾಲದ ಜೂನ್ ಜುಲೈ ತಿಂಗಳಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬಂದು ಸುತ್ತಾಡುತ್ತವೆ. ಆಗ ನಾವು ನಮ್ಮ ಮಕ್ಕಳನ್ನು ಹೊರಗೆ ಜಾಗೃತೆಯಿಂದ ಆಟವಾಡಲು ಹೇಳುತ್ತೇವೆ. ಜಾಗೃತೆಯಿಂದ ನೋಡಿಕೊಳ್ಳುತ್ತೇವೆ. ಅತೀ ಅಪರೂಪ ಎಂಬಂತೆ ಕೆಲವೆಡೆ ಹಾವುಗಳಿಂದ ಅಪಾಯ ಉಂಟಾಗಿ ದುರ್ಘಟನೆಗಳು ನಡೆಯುವುದು ಇದೆ. ಅಥವಾ ದುರ್ಘಟನೆಯಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡ ಉದಾಹರಣೆಗಳು ತುಂಬಾ ಇದೆ. ಆದರೆ ಬಿಹಾರದಲ್ಲಿ ನಡೆದ ಒಂದು ಘಟನೆ ಎಂಥವರನ್ನೂ ಸಹ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಹೌದು, ಒಂದು ವರ್ಷದ ಪುಟ್ಟ ಮಗು ಹಾವಿನ ಜೊತೆ ಆಟವಾಡುತ್ತಾ ಕಚ್ಚಿ ಕಚ್ಚಿ ಹವನ್ನೇ ಸಾಯಿಸಿದೆ. ಆದರೆ ಮಗು ಮಾತ್ರ ಪವಾಡ ಸಾದೃಶ್ಯವಾಗಿ ಬದುಕುಳಿದಿದೆ. 

Snake Died after Bihar Kid bit

ಈ ಘಟನೆ ನಡೆದದ್ದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ. ಒಂದು ವರ್ಷದ ಪುಟ್ಟ ಮಗು ಅಂಗಳದಲ್ಲಿ ಆಟವಾಡುತ್ತಿದ್ದಾಗ ಹತ್ತಿರ ಬಂದ ನಾಗರಹಾವನ್ನು ಈ ಮಗು ಕೈಯಲ್ಲಿ ಹಿಡಿದುಕೊಂಡು ಆಟವಾಡಲು ಹೊರಟಿತ್ತು, ಆ ಹಾವು ಮಗುವಿಗೆ ಯಾವುದೇ ಅಪಾಯ ಮಾಡದೆ ಮಗುವಿನ ಜೊತೆ ಇತ್ತು. ಆ ಮಗು ಆಟ ಆಡುತ್ತಾ ಆಡುತ್ತಾ ವಿಷಾದ ಹಾವಿಗೆ ಕಚ್ಚಿದೆ. ಎರಡು ಮೂರು ಸಾರಿ ಕಚ್ಚಿದಾಗ ಹಾವು ನೋವಿನಿಂದ ಸತ್ತಿದೆ. ವಿಶೇಷ ಎಂದರೆ ಅಷ್ಟು ನೋವು ಆದರೂ ಹಾವೂ ಮಗುವಿಗೆ ಏನೂ ಮಾಡಿಲ್ಲ ಮತ್ತು ವಿಷಾದ ಹಾವಿಗೆ ಕಚ್ಚಿದರೂ ಮಗುವಿಗೆ ಯಾವುದೇ ಅಪಾಯ ಆಗಲಿಲ್ಲ. ಇದು ಪವಾಡ ಎಂಬಂತೆ ಊರಿನ ಜನರು ಆಶ್ಚರ್ಯ ಚಕಿತರಾಗಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Comment