Dharmasthala Dead Body buriel case: ಹಲವು ಕುತೂಹಲಕ್ಕೆ ಎಡೆ ಮಾಡಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಇಂದು ರೋಚಕ ತಿರುವು ಸಿಕ್ಕಿದೆ. ಶವಗಳನ್ನು ಹೂತಿಟ್ಟ ಅನಾಮಧೇಯ ವ್ಯಕ್ತಿ ಸೂಚಿಸಿದ ಹಲವು ಪಾಯಿಂಟ್ ಗಳಲ್ಲಿ ಕಳೇಬರವನ್ನು ಹುಡುಕುವ ಪ್ರಯತ್ನ SIT ಅಧಿಕಾರಿಗಳ ಸಮ್ಮುಖ ನಡೆಯಿತ್ತಾದರೂ ನಿನ್ನೆ ತನಕ ಎಲ್ಲಿಯೂ ಅಸ್ಥಿಪಂಜರದ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ ಇವತ್ತು ಬೆಳ್ಳಂಬೆಳಗ್ಗೆ ಆರನೇ ಪಾಯಿಂಟ್ ನಲ್ಲಿ ಒಂದು ಅಸ್ಥಿಪಂಜರದ ಕಳೇಬರ ಪತ್ತೆಯಾಗಿದ್ದು ಕೂತುಹಲ ಕೆರಳಿಸಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಇನ್ನಷ್ಟು ಆಳ ಗುಂಡಿ ತೋಡಿ ಇನ್ನಷ್ಟು ಕಳೇಬರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಮತ್ತು ಈಗಾಗಲೇ ಸಿಕ್ಕ ಕಳೇಬರವನ್ನು ಅಧಿಕಾರಿಗಳು ಸಂಶೋಧಕರಿಗೆ ವಹಿಸಿದ್ದು, ಆ ಕಳೇಬರ ಹೆಣ್ಣದ್ದೋ ಅಥವಾ ಗಂಡದ್ದೋ ಎಂಬುದು ದೃಢ ಪಟ್ಟ ಮೇಲೆ ಅದಕ್ಕೆ ಸಂಬಂಧ ಪಟ್ಟ ದಾಖಲೆಯನ್ನು ಪರಿಶೀಲಿಸಿ ಡಿಎನ್ಎ ಟೆಸ್ಟ್ ಗೆ ಕಳುಹಿಸಲಾಗುತ್ತದೆ. ಮತ್ತು ಅದರ ಬಗ್ಗೆ ಸಂಪೂರ್ಣ ತನಿಖೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
