ತುಳುನಾಡಿನ ಜನತೆ ಕಾತರದಿಂದ ಕಾಯುತ್ತಿದ್ದ ಹಾಗೂ ತುಳುನಾಡಿನಾದ್ಯಂತ ಮಾತ್ರವಲ್ಲದೆ ಕೇರಳ ಗಡಿ ಪ್ರದೇಶದಲ್ಲೂ ಬಹಳ ಕುತೂಹಲ ಸೃಷ್ಟಿಸಿದ ಮತ್ತು ತಮ್ಮ ಟೀಸರ್ ಹಾಗೂ ಹಾಡುಗಳ ಮೂಲಕ ಸಂಚಲನ ಮೂಡಿಸಿದ ತುಳು ಚಿತ್ರ ಧರ್ಮಚಾವಡಿ ನಾಳೆ ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಮಂಗಳೂರು ಹಾಗೂ ಪುತ್ತೂರಿನಲ್ಲಿ ಪ್ರೀಮಿಯರ್ ಶೋ ನಡೆಸಿ ಭರ್ಜರಿ ಯಶಸ್ಸು ಕಂಡು ನಾಳೆ ಜನತೆಯ ಮುಂದೆ ಬರಲು ಸಿದ್ಧವಾಗಿದೆ.
ಈಗಾಗಲೇ ಮಲೆಯಾಳಿ ಮಣ್ಣ್ ದ ತುಳುವೆದಿ ಹಾಗೂ ಸತೀಶ್ ಶೆಟ್ಟಿ ಪಟ್ಲ ಅವರ ಕೆಂಡದ ಬರ್ಸ ಹಾಡುಗಳು ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ. ಹತ್ತು ಹಲವು ರೀಲ್ಸ್ ಮೂಲಕ ಕನ್ನಡದ ಟಾಪ್ ಹಾಡುಗಳಿಗೂ ಕೊಡುವಷ್ಟು ವೈರಲ್ ಆಗುತ್ತಿರುವುದು ತುಳು ಸಿನಿಮಾ ರಂಗಕ್ಕೆ ಹೆಮ್ಮೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ನಮ್ಮ ತುಳು ಸಿನಿಮಾದ ಹಾಡುಗಳು ಸಹ ಬೇರೆ ಭಾಷೆಯ ಹಾಡುಗಳಂತೆ ಮಿಲಿಯನ್ ತಲುಪುವಲ್ಲಿ ಸಂಶಯವಿಲ್ಲ ಎಂದೇ ಹೇಳಬಹುದು. ಅದಕ್ಕೆ ಧರ್ಮಚಾವಡಿ ಸಿನಿಮಾ ಹಾಡುಗಳೇ ನಿದರ್ಶನ.
ಕಳೆದ ವರ್ಷ ಧರ್ಮದೈವ ಎಂಬ ದೈವಿಕ ಸಿನಿಮಾ ನೀಡಿ ಗೆದ್ದ ತುಳುನಾಡಿನ ಯುವ ಮತ್ತು ಕ್ರಿಯೇಟಿವ್ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಅವರ ಬಹು ನಿರೀಕ್ಷೆಯ ಮತ್ತು ವಿಭಿನ್ನ ಕಥಾ ಹಂದರವುಳ್ಳ ದೈವಿಕ ಸಿನಿಮಾ ಧರ್ಮಚಾವಡಿ. ಧರ್ಮದೈವದಲ್ಲಿ ಇರುವ ಕಥೆಗೆ ಮತ್ತು ಧರ್ಮಚಾವಡಿಯಲ್ಲಿ ಇರುವ ಕಥೆಗೂ ತುಂಬಾ ವ್ಯತ್ಯಾಸ ಇದೆ ಮತ್ತು ಖಂಡಿತವಾಗಿಯೂ ಧರ್ಮಚಾವಡಿ ಸಿನಿಮಾ ಧರ್ಮದೈವ ಸಿನಿಮಾದ ಮುಂದುವರಿದ ಭಾಗ ಅಲ್ಲ ಎಂದು ನಿರ್ದೇಶಕರು ಹೇಳುತ್ತಾರೆ.

ದೈವ ಸಂಬಂಧಿತ ಚಿತ್ರ ಬರುವಾಗ ಒಂದಷ್ಟು ಮಾತುಗಳು ಬರುತ್ತದೆ. ದೈವವನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತಾರೆ, ಅಥವಾ ನಮ್ಮ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಗೆ ಧಕ್ಕೆ ಬರುವ ರೀತಿಯಲ್ಲಿ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ ಎಂಬ ಭಯಗಳು ಜನತೆ ಮುಂದೆ ಬರುತ್ತದೆ. ಮತ್ತು ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಸಹ ಮುನ್ನೆಲೆಗೆ ಬರುತ್ತದೆ. ಆದರೆ ವಿಶೇಷವೆಂದರೆ ಧರ್ಮಚಾವಡಿ ಸಿನಿಮಾದಲ್ಲಿ ದೈವ ಸಂಬಂಧಿತ ಕಥೆ ಇದ್ದರೂ ಸಹ ಎಲ್ಲಿಯೂ ದೈವದ ಮುಖ ತೋರಿಸುವುದಾಗಲಿ ಅಥವಾ ಅಪಹಾಸ್ಯಕ್ಕೆ ಎಡೆ ಕೊಡುವುದಾಗಲಿ ಅಥವಾ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಗೆ ಧಕ್ಕೆ ಬರುವ ರೀತಿಯಲ್ಲಿ ಚಿತ್ರವನ್ನು ತೋರಿಸುವುದಾಗಲಿ ಮಾಡಲಿಲ್ಲ. ಇದು ನಿರ್ದೇಶಕರ ಚಾತುರ್ಯತೆ. ಅದು ಹೇಗೆ ನಿಜವಾದ ಕಥಾ ಹಂದರವನ್ನು ಸಿನಿಮಾದಲ್ಲಿ ನಿರ್ದೇಶಕರು ತೋರಿಸುವ ಸಾಹಸ ಮಾಡಿದ್ದಾರೆ ಎಂಬುದನ್ನು ಪ್ರೇಕ್ಷಕರು ಟಾಕೀಸಿಗೆ ಹೋಗಿಯೇ ನೋಡಬೇಕು.
ಜಗದೀಶ ಅಮೀನ್ ನಡುಬೈಲು, ರವಿ ಸ್ನೇಹಿತ್ ನಿರ್ಮಾಣದಲ್ಲಿ ಕೃಷ್ಣವಾಣಿ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಧರ್ಮಚಾವಡಿ ಸಿನಿಮಾದ ಕಥೆ ನಿರ್ದೇಶನವನ್ನು ನಿತಿನ್ ರೈ ಕುಕ್ಕುವಳ್ಳಿ ಮಾಡಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ಕೂಲ್ ಲೀಡರ್ ಸಿನಿಮಾದ ನಿರ್ದೇಶಕರಾದ ರಜಾಕ್ ಪುತ್ತೂರು ಬರೆದಿದ್ದು, ತುಳು ಸಿನಿಮಾ ರಂಗದ ಬಹು ಬೇಡಿಕೆಯ ಮತ್ತು ಪ್ರತಿಭಾನ್ವಿತಾ ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಗರಡಿಯಲ್ಲಿ ಪಳಗಿರುವ ಪ್ರಸಾದ್ ಕೆ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಶ್ರೀನಾಥ್ ಪವಾರ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ. ಕೀರ್ತನ್ ಶೆಟ್ಟಿ ಸುಳ್ಯ ಈ ಸಿನಿಮಾದ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮತ್ತು ಕೆಕೆ ಪೇಜಾವರ ಅವರ ಅದ್ಭುತ ಸಾಹಿತ್ಯವಿದೆ.
ಧರ್ಮಚಾವಡಿ ಸಿನಿಮಾದಲ್ಲಿ ನಾಯಕ ನಟನಾಗಿ ರವಿ ಸ್ನೇಹಿತ್, ನಾಯಕಿಯಾಗಿ ಧನ್ಯ ಪೂಜಾರಿ ನಟಿಸಿದ್ದು ಉಳಿದಂತೆ ಮುಖ್ಯ ಪಾತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ರಕ್ಷಣ್ ಮಾಡೂರು, ಪ್ರಕಾಶ್ ಧರ್ಮ ನಗರ, ದಯಾನಂದ ರೈ ಬೆಟ್ಟಂಪಾಡಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ಶರತ್ ಆಳ್ವ, ಗಣರಾಜ್ ಭಂಡಾರಿ, ರೂಪ ಡಿ ಶೆಟ್ಟಿ, ಮನೀಶ್ ಶೆಟ್ಟಿ, ನೇಹಾ ಕೋಟ್ಯಾನ್, ರಾಜೇಶ್, ಸುಂದರ ರೈ ಮಂದಾರ, ರಂಜನ್ ಬೋಳೂರು, ಮನೀಶ್ ಶೆಟ್ಟಿ, ಸವಿತಾ ಅಂಚನ್, ನಿಶ್ಮಿತಾ ಶೆಟ್ಟಿ, ಕೌಶಿಕ್, ನಂದನ್, ಪ್ರಮೀತ್ ರಾಜ್ ಕಟ್ಟತ್ತಾರು, ದೀಕ್ಷಿತ್ ಸೊರಕೆ, ರವಿಚಂದ್ರ ರೈ ಮುಂಡೂರು, ಶ್ರೇಯಸ್ ಕುಲಾಲ್, ಅಶ್ವಥ್, ಗಣೇಶ, ಯಶಸ್ಸ್, ಮತ್ತು ಇನ್ನೂ ಹೆಚ್ಚಿನ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ 50ಕ್ಕೂ ಅಧಿಕ ಹೊಸ ಕಲಾವಿದರು ಸಿನಿಮಾದಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ತೋರಿಸಿದ್ದಾರೆ. ಈ ವಿಷಯದಲ್ಲಿ ನಿರ್ದೇಶಕರ ಧೈರ್ಯವನ್ನು ಮೆಚ್ಚಲೇಬೇಕು.
ಸಸ್ಪೆನ್ಸ್ ಥ್ರಿಲ್ಲರ್ ಥೀಮ್ ಹೊಂದಿರುವ ಧರ್ಮಚಾವಡಿ ತುಳು ಸಿನಿಮಾ ತುಳುನಾಡಿನ ಎಲ್ಲಾ ಜನತೆಗೆ ತುಳು ಸಿನಿಮಾ ರಂಗದಲ್ಲೇ ವಿಶೇಷ ಅನುಭವ ನೀಡಲಿದೆ. ಸಮಸ್ತ ಜನತೆ ಥೀಯೇಟರ್ ಗೆ ಬಂದು ಸಿನಿಮಾ ನೋಡಿ. ತಂಡವನ್ನು ಹರಸಿ ಹಾರೈಸಿ. ಈಗಾಗಲೇ ಬುಕ್ ಮೈ ಶೋ ಮತ್ತು ಇನ್ನಿತರ ಸಿನಿಮಾ ಬುಕಿಂಗ್ ಅಪ್ಲಿಕೇಶನ್ ನಲ್ಲಿ ಧರ್ಮಚಾವಡಿ ಸಿನಿಮಾದ ಟಿಕೆಟ್ ಸೇಲ್ ಮಾಡಲಾಗುತ್ತಿದೆ. ನಿಮ್ಮ ಹತ್ತಿರದ ಸಿನಿಮಾ ಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸಿ. ಮತ್ತು ನಿರ್ದೇಶಕರ ಈ ವಿನೂತನ ಪ್ರಯತ್ನವನ್ನು ನಾವು ಗೆಲ್ಲಿಸೋಣ.