ಪುತ್ತೂರಿನ ಪ್ರಣಮ್ ಕೋಟ್ಯಾನ್ ರಾಜ್ಯಕ್ಕೆ 34 ನೇ ಸ್ಥಾನ, ತುಳು ಭಾಷೆಯಲ್ಲಿ 100 ಅಂಕ
ಈ ಸಾಲಿನ SSLC ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದ್ದು, 625 ಅಂಕಗಳನ್ನು ಓರ್ವ ವಿದ್ಯಾರ್ಥಿನಿ ಪಡೆದಿದ್ದರೆ, 624 ಅಂಕಗಳನ್ನು 7 ವಿದ್ಯಾರ್ಥಿಗಳು ಹಾಗೂ 623 ಅಂಕಗಳನ್ನು 14 ವಿದ್ಯಾರ್ಥಿಗಳು ಪಡೆದಿದ್ದಾರೆ.
ಪುತ್ತೂರು ತಾಲೂಕಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರಣಮ್ ಕೋಟ್ಯಾನ್ 591 ಅಂಕ ಪಡೆದು ಶೇಕಡಾ 94.5 ರ ಮೂಲಕ ರಾಜ್ಯಕ್ಕೆ 34 ನೇ ಸ್ಥಾನ ಪಡೆದು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ವಿಶೇಷ ಎಂದರೆ ಪ್ರಣಮ್ ಕೋಟ್ಯಾನ್ ತನ್ನ ಮೂರನೇ ಸಾಮಾನ್ಯ ಐಚ್ಛಿಕ ವಿಷಯವಾಗಿ ತುಳು ಭಾಷೆಯನ್ನು ಆಯ್ಕೆ ಮಾಡಿ ಅದರಲ್ಲೂ 100 ಅಂಕಗಳನ್ನು ಪಡೆದು ಶಬ್ಬಾಶ್ ಗಿಟ್ಟಿಸಿಕೊಂಡಿದ್ದಾರೆ. ಪ್ರಣಮ್ ಕೋಟ್ಯಾನ್ ಉಪ್ಪಿನಂಗಡಿ ಗ್ರಾಮದ ಶ್ರೀಮತಿ ದೀಪ್ತಿ ಜಯರಾಜ್ ಮತ್ತು ಶ್ರೀ ಜಯರಾಜ್ ಅಮೀನ್ ರವರ ಪುತ್ರ.
ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ಸುಮಾರು ಎರಡು ವಾರದಲ್ಲಿ ನಡೆದ 2023-24ನೇ ಸಾಲಿನ ಕರ್ನಾಟಕ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ನಿನ್ನೆ ಸುಮಾರು 10.30 ಗಂಟೆಗೆ ಪ್ರಕಟವಾಗಿದೆ. ಈ ವರ್ಷ ಸುಮಾರು 8 ಲಕ್ಷ ವಿದ್ಯಾರ್ಥಿಗಳು SSLC ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾಗಿದ್ದು ಶೇಕಡ 73.40 ಫಲಿತಾಂಶ ದಾಖಲಾಗಿದೆ. ಈ ಸಲನೂ ಉಡುಪಿ ಜಿಲ್ಲೆ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಉಳಿಸಿಕೊಂಡಿದೆ. ಯಾದಗಿರಿ ಜಿಲ್ಲೆ ಫಲಿತಾಂಶದಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ.
2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಚೆಕ್ ಮಾಡಲು Check sslc results ಗೆ ಭೇಟಿ ನೀಡಿ.