ಎದುರಿಗಿರುವವರನ್ನು ಬೆತ್ತಲಾಗಿ ತೋರಿಸುವ ಜಾದೂ ಕನ್ನಡಿಯ ಹಿಂದೆ ಬಿದ್ದ ವೃದ್ಧ! ಕೊನೆಗೆ ಏನಾಯಿತು ಗೊತ್ತಾ?
ನಾಸಾ ಕೂಡ ಬಳಸುವ ಪ್ರಾಚ್ಯ ವಸ್ತುಗಳಲ್ಲಿ ಒಂದಾದ ಕನ್ನಡಿ ನಿಮಗೆ ಮುಂದಿರುವವರು ಬೆತ್ತಲಾಗಿ ಕಾಣುವಂತೆ ಮಾಡುತ್ತದೆ ಎಂಬ ಮಾತಿಗೆ ಮರುಳಾಗಿ ಸುಮಾರು ಒಂಬತ್ತು ಲಕ್ಷ ರೂಪಾಯಿಯನ್ನು ಉತ್ತರ ಪ್ರದೇಶದ ಓರ್ವ ವೃದ್ಧ ಕಳೆದುಕೊಂಡಿದ್ದಾರೆ. ಆತನ ಹೆಸರು ಅವಿನಾಶ್ ಕುಮಾರ್ ಶುಕ್ಲ.
ಹೌದು ವಿಚಿತ್ರವಾದರೂ ಇದು ಸತ್ಯ. ಇಂತಹದ್ದೊಂದು ಅಪರೂಪದ ಮತ್ತು ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಯಸ್ಸು 74 ಆದರೂ ವಿಚಿತ್ರ ಚಪಲಕ್ಕೆ ಬಿದ್ದ ವೃದ್ಧರೊಬ್ಬರು ಕಳೆದುಕೊಂಡಿದ್ದು ಬರೋಬ್ಬರಿ 9 ಲಕ್ಷ ರೂಪಾಯಿ. ತಾನು ಮೋಸ ಹೋದ ವಿಚಾರ ಗೊತ್ತಾಗುತ್ತಿದ್ದಂತೆ ವೃದ್ಧ ಅವಿನಾಶ್ ಕುಮಾರ್ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ವಂಚನೆಯ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪಶ್ಚಿಮ ಬಂಗಾಳದ ಮೂವರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಮೊಲಯಾ ಸರ್ಕಾರ್, ಸುದೀಪ್ತ ಸಿನ್ಹಾ, ಪಾರ್ಥ ಸಿಂಘ್ರಾಯ ಎಂಬ ಮೂವರನ್ನು ಒಡಿಶಾದ ನಯಾಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಮೂವರು ವಂಚಕರು ಬಹಳ ಚಾಕಚಕ್ಯತೆಯಿಂದ ಪ್ರಿ ಪ್ಲಾನ್ ಮಾಡಿಕೊಂಡು ಮತ್ತು ವೃದ್ಧರನ್ನೇ ಗುರಿಯಾಗಿಸಿ ಈ ವಂಚನೆಗೆ ಇಳಿದಿದ್ದಾರೆ. ಇವರು ಸಿಂಗಪುರದ ಕಂಪನಿಯ ಉದ್ಯೋಗಿಗಳಂತೆ ನಂಬಿಸಿ ಅವಿನಾಶ್ ಕುಮಾರ್ ಗೆ ಪರಿಚಯವಾಗುತ್ತಾರೆ. ತಾವು ಪ್ರಾಚ್ಯ ವಸ್ತುಗಳನ್ನು ಹೊಂದಿದ್ದು, ಅವುಗಳು ಬಹಳ ದುಬಾರಿ ಮತ್ತು ಅದರ ವಿಶೇಷ ಶಕ್ತಿಯಿಂದಾಗಿ ನಾಸಾ ಸಹ ಅದನ್ನು ಬಳಸುತ್ತಿದೆ, ಅವುಗಳಲ್ಲಿ ಈ ವಿಶೇಷ ಕನ್ನಡಿ ಸಹ ಒಂದು ಮತ್ತು ಇದು ಮುಂದಿರುವವರು ಬೆತ್ತಲಾಗಿ ಕಾಣುತ್ತಾರೆ ಎಂದು ನಂಬಿಸುತ್ತಾರೆ. ಅಲ್ಲದೆ ಈ ವಸ್ತು ಬೇಕಾದಲ್ಲಿ ೨ ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಡುತ್ತಾರೆ. ಇದನ್ನು ನಂಬಿದ ಅವಿನಾಶ್ ಕುಮಾರ್ ಕೆಟ್ಟ ಆಸೆಗೆ ಬಿದ್ದು ಇವರೊಂದಿಗೆ ಡೀಲ್ ಗೆ ಇಳಿಯುತ್ತಾನೆ. ಒಂದು ಸಾರಿ ಒಂದು ಹೋಟೆಲ್ ಕರೆಸಿದಾಗ ಅಲ್ಲಿ ಈ ಖದೀಮರ ನಿಜ ಬಣ್ಣ ಬಯಲಾಗುತ್ತದೆ ಮತ್ತು ತಾನು ಮೋಸ ಹೋಗಿರುವುದು ಅರಿವಾಗುತ್ತದೆ. ಅಷ್ಟರಲ್ಲಾಗಲೇ ಅವಿನಾಶ್ 9 ಲಕ್ಷ ರೂಪಾಯಿ ಕಳೆದುಕೊಂಡಿರುತ್ತಾನೆ. ಕೊನೆಗೆ ಅವಿನಾಶ್ ಪೋಲೀಸರ ಮೊರೆ ಹೋಗಬೇಕಾಯಿತು.