ಸೌಜನ್ಯಳ ಅತ್ಯಾಚಾರಿಗಳಿಗೆ ನಡುಕ ಹುಟ್ಟಿಸಿದ KRS ಪಕ್ಷ

ಸೌಜನ್ಯಳ ಅತ್ಯಾಚಾರಿಗಳಿಗೆ ನಡುಕ ಹುಟ್ಟಿಸಿದ KRS ಪಕ್ಷ

ಇನ್ನಾದರೂ ನ್ಯಾಯ ಸಿಗಬಹುದೇ? 

ಭ್ರಷ್ಟಾಚಾರಿಗಳ ಸಿಂಹ ಸ್ವಪ್ನವಾಗಿದ್ದ ಕೆ.ಆರ್.ಎಸ್ ಪಕ್ಷ, ಅತ್ಯಾಚಾರಿಗಳ ವಿರುದ್ಧ ಸಮರ. 

ಕರ್ನಾಟಕದಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಸಮರ ಸಾರಿರುವ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪಕ್ಷ ಕೆ.ಆರ್.ಎಸ್ ಇಂದು ಸೌಜನ್ಯಳ ಪರ ನ್ಯಾಯದ ಹೋರಾಟದಲ್ಲಿ ಬೀದಿಗಿಳಿದಿದ್ದಾರೆ. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿರುವ KRS ಪಕ್ಷ ಇನ್ನು ಅತ್ಯಾಚಾರಿಗಳ ವಿರುದ್ಧ ಸಮರ ಸಾರಿದೆ. 

Click to Join Whatsapp Group

ಹೌದು ಕರಾವಳಿಯಲ್ಲಿ ಕಳೆದ 12 ವರ್ಷಗಳಿಂದ ಜನರ ನಿದ್ದೆ ಗೆಡಿಸಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇತ್ಯರ್ಥವಾಗದೇ ನಿಗೂಢವಾಗಿ ಉಳಿದಿದ್ದು ಇತ್ತೀಚೆಗೆ ಹಲವು ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತಿವೆ. ಇಲ್ಲಿ ತನಕ ಮಹೇಶ್ ಶೆಟ್ಟಿ ತಿಮರೋಡಿಯವರು ಸೌಜನ್ಯಳ ಕುಟುಂಬವರೊಂದಿಗೆ ಕೈ ಜೋಡಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದು, ಸದ್ಯ ಹಲವು ಸಂಘಟನೆಗಳು, ಅರುಣ್ ಕುಮಾರ್ ಪುತ್ತಿಲರ ಸಂಘಟನೆ,  ಇಂದು KRS ಪಕ್ಷ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿದೆ. ಇದರಿಂದ ಸೌಜನ್ಯಳ ಪರ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. 

ಕರ್ನಾಟಕ ರಕ್ಷಣಾ ಸಮಿತಿ ಪಕ್ಷ ‘ದೌರ್ಜನ್ಯದ ವಿರುದ್ಧ ಸೌಜನ್ಯ” ಎಂಬ ಅಡಿಬರಹದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರು ತನಕ ೩೩೦ ಕಿಮೀ ಪಾದಯಾತ್ರೆಯನ್ನು ಕೈಗೊಂಡಿದೆ. ಈ ಪಾದಯಾತ್ರೆಯು  ಇದೇ ಆಗಸ್ಟ್ 26 ರಿಂದ ಸೆಪ್ಟೆಂಬರ್ 08 ವರೆಗೆ ಒಟ್ಟು 14 ದಿನಗಳ ಕಾಲ ನಡೆಯಲಿದೆ. ಇನ್ನಾದರೂ ಸೌಜನ್ಯಳಿಗೆ ನ್ಯಾಯ ಸಿಗಬಹುದೇ ಎಂಬ ಆಶಯ ಮೂಡುವಂತಾಗಿದೆ.      

 

Leave a Comment