ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ
ರಾಜ್ಯ ಚುನಾವಣಾ ಯುದ್ಧ ಹತ್ತಿರ ಬರುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಜಂಪಿಂಗ್ ಜಪಾಂಗ್ ಸರ್ವೇ ಸಾಮಾನ್ಯ. ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಏರುತ್ತಿದ್ದು ಸದ್ಯ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ದಿನದಿಂದ ಹೆಚ್ಚುತ್ತಿದೆ. ಇಲ್ಲಿ ತನಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಹೆಸರು ಮುನ್ನೆಲೆಯಲ್ಲಿದ್ದು ಇದೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದುವೇ ಶಕುಂತಲಾ ಶೆಟ್ಟಿ(Shakuntala Shetty) ಹೆಸರು .
ಸದ್ಯ ಕಾಂಗ್ರೆಸ್ ನಲ್ಲಿರುವ ಶಕುಂತಳಾ ಶೆಟ್ಟಿಯವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪುವ ಆತಂಕ ಇದ್ದು ಇದೀಗ ಶಕುಂತಳಾ ಶೆಟ್ಟಿ ಯವರು ಬಿಜೆಪಿಯಲ್ಲಿ ಸ್ಪರ್ಧಿಸುವ ಬಗ್ಗೆ ಗಾಳಿ ಸುದ್ದಿಗಳು ಹರಡುತ್ತಿವೆ. ಅದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ಕೇಂದ್ರ ಬಿಜೆಪಿಯಿಂದ ಕರಾವಳಿಯಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಿರುವುದು ಈ ಗಾಳಿ ಸುದ್ದಿಗೆ ಪುಷ್ಟಿ ನೀಡಿದಂತಿದೆ.
ಮೂಲ ಬಿಜೆಪಿಯವರೇ ಆಗಿದ್ದಂತಹ ಶ್ರೀಮತಿ ಶಕುಂತಲಾ ಶೆಟ್ಟಿಯವರು ಪುನಃ ಬಿಜೆಪಿ ಗೆ ಮರಳಿ ಬರುವುದರ ಬಗ್ಗೆ ನಿಮ್ಮ ಅನಿಸಿಕೆ ಏನು ?
[TS_Poll id=”7″]
Shakku akkanige congress pakshadalli ticket noorakke nooru pakka