ಪುತ್ತೂರಿನ ಸ್ಮಶಾನದಲ್ಲಿ ದೆವ್ವ ಕಂಡು ಓಡಿ ಹೋದ ಬಾಲಕ. ಮುಂದೇನಾಯಿತು ?

ಈ ಆಧುನಿಕ ಯುಗದಲ್ಲೂ ದೆವ್ವ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಪುಟ್ಟ ಬಾಲಕ ದೆವ್ವವನ್ನು ನೋಡಿ ಓಡಿದ ಕೆಥೆ ನೀವು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಾ.

ಪುತ್ತೂರಿನ ಪರಿಸರದಲ್ಲಿರುವ ಸ್ಮಶಾನದಲ್ಲಿ ನಡೆದ ಘಟನೆ ಅದು. ಆತ ಪುಟ್ಬಾಲ್ ಹಿಡಿದುಕೊಂಡು ಸ್ಮಶಾನದ ಹತ್ತಿರವೇ ಆಡುತ್ತಿದ್ದ. ತಂದೆ ಸ್ಮಶಾನಕ್ಕೆ ಗೆಳೆಯನ ಪುಣ್ಯಸ್ಮರಣೆಗೆ ಬರುವಾಗ ಮಗನೂ ಜೊತೆಯಲ್ಲೇ ಪುಟ್ಬಾಲ್ ನ್ನು ಹಿಡಿದುಕೊಂಡು ಬಂದಿರುತ್ತಾನೆ. ಸ್ಮಶಾನದೊಳಗಡೆ ಹೋಗದೆ ಹುಡುಗ ಸ್ಮಶಾನದ ಮೆಟ್ಟಿಲಲ್ಲೇ ಆಟ ಆಡುತ್ತಾ ಕೂರುತ್ತಾನೆ. ಸ್ವಲ್ಪ ಹೋತ್ತರಲ್ಲೇ ಸ್ಪುರದ್ರೂಪಿ ಯುವಕ ಈ ಹುಡುಗನೊಬ್ಬ ಹತ್ತಿರದಲ್ಲೇ ಹಾದು ಹೋಗುವುದನ್ನು ಹುಡುಗ ಗಮನಿಸುತ್ತಾನೆ. ಆ ಯುವಕ ಸ್ಮಶಾನದೊಳಗಡೆ ಹೋಗುತ್ತಾನೆ.

ಅಷ್ಟರಲ್ಲಿ ಸುತ್ತಮುತ್ತ ಸ್ವಲ್ಪ ವಿಚಿತ್ರ ಘಟನೆಗಳು, ವಿಚಿತ್ರ ಶಬ್ದಗಳು ಕೇಳಲಾರಂಭಿಸುತ್ತದೆ. ಏಕಾಂತವಾಗಿದ್ದ ಹುಡುಗನಿಗೆ ಈ ವಿಚಿತ್ರ ಘಟನೆ ಮನಸ್ಸಿನಲ್ಲಿ ಹೆದರಿಕೆ ಹುಟ್ಟುಹಾಕಿತ್ತು. ಒಳಗೆ ಅಪ್ಪ ಇರುವಲ್ಲಿಗೆ ಓಡಿ ಕೊಂಡು ಬಂದ ಹುಡುಗನಿಗೆ ನಡೆದ ವಿಚಿತ್ರ ಶಬ್ದಗಳನ್ನು ವಿವರಿಸಲಾಗದೆ ಹತ್ತಿರ ನಿಂತುಕೊಳ್ಳುತ್ತಾನೆ.

ಪ್ರಾರ್ಥನೆ ಮಾಡುತ್ತಿದ್ದ ಅಪ್ಪ ಮತ್ತು ಅವರ ಜೊತೆಗಾರರ ಜೊತೆಗಿದ್ದ ಹುಡುಗ ಹೂಳಲು ಇಟ್ಟಿದ್ದ ಶವವನ್ನು ಒಮ್ಮೆ ಇಣುಕಿ ನೋಡುತ್ತಾನೆ. ಹೊರಗಡೆ ಆಡುತ್ತಿದ್ದ ವೇಳೆ ಎದುರಾಗಿದ್ದ ಆ ಯುವಕ ಇಲ್ಲಿ ಶವವಾಗಿ ಮಲಗಿದ್ದಾನೆ. ಈ ದೃಶ್ಯವನ್ನು ಕಂಡ ಹುಡುಗನಿಗೆ ಗಾಬರಿಗೊಳ್ಳುತ್ತಾನೆ. ಆಡುವ ಹೊತ್ತಲ್ಲಿ ದುಗುಡ ಹುಟ್ಟು ಹಾಕಿದ್ದ ಘಟನೆಯು ಈ ಹುಡುಗನ ಮನಸ್ಸಲ್ಲಿ ಉಳಿದುಬಿಡುತ್ತದೆ. ನಂತರ ದಿನಗಳಲ್ಲಿ ಆತ ಕಂಡುದ್ದ ದೆವ್ವ ಪ್ರತಿ ದಿನ ರಾತ್ರಿ ಹುಡುಗನಿಗೆ ಉಪದ್ರವನ್ನು ಕೊಡಲು ಶುರುಮಾಡುತ್ತದೆ.

ದೆವ್ವ ಕಂಡದ್ದು ನಿಜವೋ ಸುಳ್ಳೋ ಗೊತ್ತಿಲ್ಲವಾದರೂ ಆತ ಆ ಘಟನೆಯಿಂದ ಗಾಬರಿಗೊಂಡು ಹಲವು ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತಾನೆ. ಸಣ್ಣ ಪ್ರಾಯದಲ್ಲಿರುವಾಗ ತಂದೆಗೆ ಈ ವಿಚಾರವನ್ನು ತಿಳಿಸುವಷ್ಟು ಪ್ರಭುದ್ದತೆ ಆ ಹುಡುಗನಿಗಿರಲಿಲ್ಲ. ಮತ್ತು ಸಣ್ಣ ಮಕ್ಕಳ ಇಂಥಾ ಹೆದರಿಕೆಯ ಮಾತುಗಳು ಸಹಜವಾದ್ದರಿಂದ ಘಟನೆಯ ಬಗ್ಗೆ ತಿಳಿದುಕೊಳ್ಳುವಷ್ಟು ವ್ಯವಧಾನ ತಂದೆಗೆ ಇರಲಿಲ್ಲ. ಇನ್ನು ಈಗ ಬೆಳೆದು ನಿಂತ ಮಗ ಭೂತ ದೆವ್ವ ಅಂತ ತಂದೆಯಲ್ಲಿ ಕಥೆ ಹೇಳಿದರೆ ನಗೆಪಾಟಲಿಗೀಡಾಗಬಹುದು ಎಂಬ ಅಂಜಿಕೆಯಿಂದ ಈ ದೆವ್ವ ಕಥೆ ಅಲ್ಲಿಯೇ ಆ ಹುಡುಗನ ಮನಸ್ಸಲ್ಲಿ ಉಳಿಯುತ್ತದೆ.

ಆದರೆ ಸಮಯ ಕಳೆದಂತೆ ಸತ್ಯ ಗೊತ್ತಾಗಲೇ ಬೇಕು. ಆ ಸತ್ಯ ಈಗ ಹೊರ ಬಿದ್ದಿದೆ. ನೀವು ಆ ಸತ್ಯಕ್ಕಾಗಿ ಕಾಯುತ್ತಿದ್ದೀರಾದರೆ ಈ ಕೆಳಗಿನ ವಿಡಿಯೋ ನೋಡಿ. ನಿಮಗೂ ಪುತ್ತೂರಿನಲ್ಲಿ ಕಂಡ ದೆವ್ವ ಏನಾಯಿತು ಕೊನೆಗೆ ಎಂಬುದು ಈ ವಿಡಿಯೋ ನೋಡಿದಾಗ ಅರಿವಿಗೆ ಬರುತ್ತದೆ.

 

ಹೌದು, ಈ ದೆವ್ವದ ಹೆಸರು ”ಅಲೆಕ್ಸಾಂಡರ್”. ಪುತ್ತೂರಿನ ಸ್ಮಶಾನವೊಂದರಲ್ಲಿ ಕಂಡು ಬಂದ ಅಲ್ಲ, ಬದಲಾಗಿ ಬಿಡುಗಡೆಗೊಂಡ ವಿಭಿನ್ನ ಕಥಾ ಹಂದರವುಳ್ಳ ಮತ್ತು ಮೈನವಿರೇಳಿಸುವ ಕನ್ನಡ ಕಿರುಚಿತ್ರ.

ಡ್ರೀಮ್ ಕ್ಯಾಚರ್ಸ್ ಅರ್ಪಿಸುವ, ಬಹು ನಿರೀಕ್ಷಿತ ಕಿರುಚಿತ್ರ Alexander ಕಿರುಚಿತ್ರ ಕಳೆದ ಡಿಸೆಂಬರ್ ೧೩ ೨೦೨೧ರಂದು ಸಂಜೆ 6.30 ವೇಳೆಗೆ ಸರಿಯಾಗಿ ಪುತ್ತೂರಿನ ಸ್ಮಶಾನದಲ್ಲಿ ದೆವ್ವ ವೇಷದಾರಿಯಿಂದಲೇ ಡ್ರೀಮ್ ಕ್ಯಾಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತು. ತನ್ನ ವಿಭಿನ್ನ ಪೋಸ್ಟರ್ ನಿಂದಲೇ ಕುತೂಹಲ ಹುಟ್ಟುಹಾಕಿದ್ದ ಈ ಕಿರುಚಿತ್ರ ”ಧೈರ್ಯ ಇದ್ದವರಿಗೆ ಮಾತ್ರ” ಎಂಬ ಸಬ್ ಟೈಟಲ್ ನಿಂದ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು.

ಕನ್ನಡ ಸಿನಿಮಾದ ನಾಯಕ ನಟರಾದ ಮತ್ತು ಅನೇಕ ಕಿರುಚಿತ್ರಗಳಲ್ಲಿ ಆಲ್ಬಮ್ ಸಾಂಗ್ ಗಳಲ್ಲಿ ನಟಿಸಿದ ಪುತ್ತೂರಿನ ಆರ್ಯನ್ ರವರು ಹೇಳುವಂತೆ ಇದೊಂದು ಹಾರರ್ ಕಿರುಚಿತ್ರವಾದ್ದರಿಂದ ಇದನ್ನು ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಮತ್ತು ಅದರಂತೆ ಅಪಶಕುನದ ಸಂಖ್ಯೆ ಎಂಬ ನಂಬಿಕೆಯ ಪ್ರಕಾರ ದಿನಾಂಕ ೧೩ ಗೊತ್ತು ಮಾಡಿ ಅಂದು ಸ್ಮಶಾನದಲ್ಲಿ ದೆವ್ವ ವೇಷಧಾರಿಯಿಂದಲೇ ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಕಥೆ ಚಿತ್ರಕಥೆ ಸಂಭಾಷಣೆ ಸಂಕಲನ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ನಟ ಆರ್ಯನ್ ವಹಿಸಿದ್ದು ಉಳಿದಂತೆ ಯತೀಶ್ ಕುಲಾಲ್, ವೇದಿಕ್, ನಿಶ್ಮಿತಾ ಆಚಾರ್ಯ, ಚನ್ನು ಬೀರ್ವಾ, ಅಶ್ವಥ್ ಪುತ್ತೂರು, ಕೀರ್ತಿ ತಂಡ ಅಲೆಕ್ಸಾಂಡರ್ ಚಿತ್ರಕ್ಕೆ ಶ್ರಮಿಸಿದೆ.

”ಅಲೆಕ್ಸಾಂಡರ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು ಎಲ್ಲರು ಕಿರುಚಿತ್ರವನ್ನು ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಹಾರೈಸಬೇಕೆಂದು ಚಿತ್ರತಂಡ ಕೇಳಿಕೊಂಡಿದೆ.

 

Leave a Comment