ಪೊಲೀಸರೊಂದಿಗೆ ಮನೆಗೆ ಬಂದಿದ್ದ ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಜಗಳ?

Raj Kundra adult film case actress Shilpa Shetty had a heated argument with her husband

ಹೈಲೈಟ್ಸ್‌:

  • ಅಶ್ಲೀಲ ಸಿನಿಮಾ ತಯಾರಿಕೆ ದಂಧೆ ಕೇಸ್‌ನಲ್ಲಿ ರಾಜ್ ಕುಂದ್ರಾ ಆರೋಪಿ
  • ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ
  • ರಾಜ್ ಕುಂದ್ರಾ ಜೊತೆಗೆ ವಾಗ್ವಾದ ನಡೆಸಿದ ಪತ್ನಿ ಶಿಲ್ಪಾ ಶೆಟ್ಟಿ

ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆ್ಯಪ್‌ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸದ್ಯ ಅವರನ್ನು ಜುಲೈ 27ರ ತನಕ ನ್ಯಾಯಾಂಗ ಬಂಧನದಲ್ಲಿ ಇರಿಸಲು ನ್ಯಾಯಾಲಯವು ಆದೇಶ ನೀಡಿದೆ. ಈ ಮಧ್ಯೆ ಪತಿ ರಾಜ್‌ ಕುಂದ್ರಾ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಜೋರು ವಾಗ್ವಾದ ನಡೆಸಿ, ಜಗಳ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಯಾವಾಗ? ಮುಂದೆ ಓದಿ.

 

ವಿಚಾರಣೆಗೆ ಬಂದಾಗ ನಡೆಯಿತು ಗಲಾಟೆ
ಜುಲೈ 19ರಂದು ರಾಜ್ ಕುಂದ್ರಾರನ್ನು ಕೆಲ ದಿನಗಳ ಹಿಂದೆ ಅವರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ವಿಚಾರಣೆ ಮಾಡುವ ಸಲುವಾಗಿ ಪೊಲೀಸರು ಅವರ ನಿವಾಸ ಕಿನರಾಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಶಿಲ್ಪಾ ಶೆಟ್ಟಿ ಪತಿಯನ್ನು ಕಂಡು ಗರಂ ಆಗಿದ್ದಾರೆ. ರಾಜ್ ಕುಂದ್ರಾ ಜೊತೆಗೆ ಶಿಲ್ಪಾ ಶೆಟ್ಟಿ ಕೆಟ್ಟದಾಗಿ ವಾಗ್ವಾದ ನಡೆಸಿ, ಜಗಳ ಮಾಡಿದ್ದಾರೆ. ದುಃಖದಿಂದ ಪೊಲೀಸರ ಎದುರೇ ಕುಸಿದುಬಿದ್ದಿದ್ದಾರೆ. ರಾಜ್ ಕುಂದ್ರಾರನ್ನು ಪೊಲೀಸರು ಕರೆತಂದಾಗ ಶಿಲ್ಪಾ ಭಯಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ.

 

ಶಿಲ್ಪಾ ವಿಚಾರಣೆ ಮಾಡಿದ್ದ ಅಧಿಕಾರಿಗಳು
ಇದೇ ವೇಳೆ ಶಿಲ್ಪಾ ಶೆಟ್ಟಿ ಅವರ ವಿಚಾರಣೆಯನ್ನು ಅಧಿಕಾರಿಗಳು ಮಾಡಿದ್ದರು. ಸುಮಾರು 2 ಗಂಟೆಗಳ ಕಾಲ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದರು. ‘ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಾಜ್ ಕುಂದ್ರಾ ತಯಾರಿಸಿದ್ದು ಅಶ್ಲೀಲ ಸಿನಿಮಾಗಳಲ್ಲ, ಬರೀ ಕಾಮಪ್ರಚೋದಕ ಸಿನಿಮಾಗಳು ಮಾತ್ರ. ಅವರ ಆಪ್‌ನಲ್ಲಿರುವ ಸಿನಿಮಾಗಳು ಅಶ್ಲೀಲ ಸಿನಿಮಾಗಳಲ್ಲ, ಬದಲಾಗಿ ಇತರ ಓಟಿಟಿ ವೇದಿಕೆಯಲ್ಲಿರುವಂತಹ ಕಾಮಪ್ರಚೋದಕ ಸಿನಿಮಾಗಳಷ್ಟೇ’ ಎಂದು ಶಿಲ್ಪಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.

 

ಆದರೆ, ಪೋಲಿಸರು ವಶಪಡಿಸಿಕೊಂಡಿರುವ ಕೆಲ ದಾಖಲೆಗಳಲ್ಲಿ ಶಿಲ್ಪಾ ಅವರ ಸಹಿ ಕೂಡ ಇರುವುದು ಪತ್ತೆಯಾಗಿದೆ. ಹಾಗಾಗಿ, ಅವರನ್ನು ಇನ್ನೊಮ್ಮೆ ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಇನ್ನು, ಅಂಧೇರಿ ಪ್ರಾಂತ್ಯದಲ್ಲಿರುವ ರಾಜ್ ಕುಂದ್ರಾ ಅವರ ಕಚೇರಿ ಮೇಲೆ ದಾಳಿ ಮಾಡಿದಾಗ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳಿಗೆ ಒಂದು ರಹಸ್ಯ ಬೀರು ಸಿಕ್ಕಿದೆ. ಸದ್ಯ ಈ ಬೀರುವಿನಲ್ಲಿ ಏನಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ.

Source link

 

Leave a Comment