ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಭಾರಿ ಹಿಂಸಾಚಾರ: ಐವರು ಪೊಲೀಸರ ಸಾವು

 5 assam policemen killed in clashes at border with mizoram

ಹೈಲೈಟ್ಸ್‌:

  • ಅಸ್ಸಾಂ- ಮಿಜೋರಾಂ ನಡುವೆ ತೀವ್ರಗೊಂಡ ಗಡಿ ವಿವಾದ
  • ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪರಸ್ಪರ ದೋಷಾರೋಪ
  • ಘಟನೆಯಲ್ಲಿ ಅಸ್ಸಾಂನ ಐವರು ಪೊಲೀಸರ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
  • ಶನಿವಾರವಷ್ಟೇ ಈಶಾನ್ಯ ರಾಜ್ಯಗಳ ಸಿಎಂ ಜತೆ ಸಭೆ ನಡೆಸಿದ್ದ ಅಮಿತ್ ಶಾ

ಗುವಾಹಟಿ: ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೋರಾಂ ನಡುವೆ ಗಡಿ ಸಂಘರ್ಷ ಉಲ್ಬಣಗೊಂಡಿದ್ದು, ಎರಡೂ ರಾಜ್ಯಗಳ ಜನರ ನಡುವೆ ನಡೆದ ಘರ್ಷಣೆ ವೇಳೆ ಐವರು ಪೊಲೀಸರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಸಾರ್ವಜನಿಕರು ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಸರಕಾರ ತಿಳಿಸಿದೆ. ಕಚಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

 

ಅಸ್ಸಾಂನ ವೈರೆಂಟ್ಗೆ ಪಟ್ಟಣದಲ್ಲಿ ಸೋಮವಾರ ಹಿಂಸಾಚಾರ ತಲೆದೋರಿದೆ. ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನಕ್ಕೆ ಈ ಸಂಘರ್ಷ ನಡೆದಿದೆ. ಲೈಲಾಪುರದಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಸೇನಾ ಶಿಬಿರವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಿಜೋರಾಂ ವಿರುದ್ಧ ಅಸ್ಸಾಂ ಆರೋಪಿಸಿದೆ.

 

ಈಶಾನ್ಯ ರಾಜ್ಯಗಳಲ್ಲಿ ಗಡಿ ವಿವಾದ: ಎರಡು ರಾಜ್ಯಗಳ ನಾಗರಿಕರ ಬಡಿದಾಟ, ಟ್ವಿಟ್ಟರ್‌ನಲ್ಲಿ ಸಿಎಂಗಳ ಕಿತ್ತಾಟ!

 

ದುಷ್ಕರ್ಮಿಗಳು ತನ್ನ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಬಳಿಕ ಪರಿಸ್ಥಿತಿ ನಿಯಂತ್ರಿಸಲು ಹೋದ ಮಿಜೋರಾಂ ಪೊಲೀಸರ ಮೇಲೆಯೂ ದಾಳಿ ನಡೆದಿದೆ ಎಂದು ಅದು ಹೇಳಿದೆ.

ಅಸ್ಸಾಂ ಪೊಲೀಸರು ಗಡಿ ದಾಟಿ ಒಳಬಂದ ಬಳಿಕ ಹಿಂಸಾಚಾರ ಆರಂಭವಾಗಿದೆ. ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳಿಗೆ ಹಾನಿ ಮಾಡಿದ್ದಲ್ಲದೆ, ತನ್ನ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಮಿಜೋರಾಂ ಆರೋಪಿಸಿದೆ.

ಬೆಳಿಗ್ಗೆ 11.30ರ ವೇಳೆಗೆ ಸುಮಾರು 200 ಅಸ್ಸಾಂ ಪೊಲೀಸರು ವೈರೆಂಟ್ಗೆ ಪಟ್ಟಣದ ಆಟೋ ರಿಕ್ಷಾ ನಿಲ್ದಾಣಕ್ಕೆ ಬಂದಿದ್ದರು. ಸಮೀಪದಲ್ಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ನೆಲೆಯನ್ನು ಬಲವಂತವಾಗಿ ಮುಚ್ಚಿಸಿದರು. ಬಳಿಕ ಹೆದ್ದಾರಿಯಲ್ಲಿ ವಾಹನಗಳಿಗೆ ಹಾನಿ ಮಾಡಿದರು. ಅದನ್ನು ತಡೆಯಲು ಪ್ರಯತ್ನಿಸಿದ ನಮ್ಮ ಅಧಿಕಾರಿಗಳ ಮಾತನ್ನು ಅವರು ಕೇಳಲಿಲ್ಲ. ಅಶ್ರುವಾಯು, ಗ್ರೆನೇಡ್‌ಗಳನ್ನು ಎಸೆದರು. ಸಂಜೆ 4.30ರ ವೇಳೆಗೆ ಗುಂಡುಗಳನ್ನು ಕೂಡ ಹಾರಿಸಿದರು ಎಂದು ಮಿಜೋರಾಂ ಮುಖ್ಯಮಂತ್ರಿ ಜೊರಂತಗಾ ಆರೋಪಿಸಿದ್ದಾರೆ. ಈ ಎರಡೂ ರಾಜ್ಯಗಳ ಸಿಎಂಗಳು ಟ್ವಿಟ್ಟರ್‌ನಲ್ಲಿ ಕಿತ್ತಾಡಿಕೊಂಡಿದ್ದಾರೆ.

Source link

 

Leave a Comment