ಸುಳ್ಯ : ಎರಡೂ ಕಿಡ್ನಿಗಳ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಸ್ಸಹಾಯಕನಾಗಿ ಮಲಗಿರುವ ಹುಡುಗ ರಕ್ಷಿತ್ ಗೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

 

 

 

ಈತ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ರಕ್ಷಿತ್ ಪಾಟಾಳಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈತನದ್ದು ಬಡ ಕುಟುಂಬ. ರಕ್ಷಿತ್ ತನ್ನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಮಲಗಿದ್ದಾನೆ. ರಕ್ಷಿತ್ ನ ಆಸ್ಪತ್ರೆಯ ಖರ್ಚು ಭರಿಸಲು ಇಡೀ ಕುಟುಂಬ ಇನ್ನಿಲ್ಲದ ಪಾಡು ಪಡುತ್ತಿದೆ.

ಕೂಲಿ ಕೆಲಸ ಮಾಡಿ ಸಂಸಾರವನ್ನು ನಡೆಸುವ ತಂದೆ ಶ್ರೀಧರ ಪಾಟಾಳಿಯವರು  ಹೇಗೋ ಅಳಿದುಳಿದ ಹಣದಲ್ಲಿ `ರಕ್ಷಿತ್ ನ ಚಿಕಿತ್ಸೆ ಮುಂದುವರಿಸಲು ಪ್ರಯತ್ನ ಪಡುತ್ತಿದ್ದಾರೆ. ಚಿಕಿತ್ಸೆಯು ಮುಂದುವರಿಯುತ್ತಿದೆ. ಪ್ರತಿ ತಿಂಗಳೂ 20 ರಿಂದ 25 ಸಾವಿರ ರೂಪಾಯಿಗಳೂ ಕೇವಲ ಡೈಯಾಲಿಸೀಸ್ ಮಾಡಿಸಲು  ಖರ್ಚಾಗುತ್ತಿದೆ ಎಂದು ಸಹೋದರ ಅಶ್ವಿತ್ ಹೇಳಿದ್ದಾರೆ.

ಈಗ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಕಂಗಾಲಾಗಿರುವ ಈ ಕುಟುಂಬಕ್ಕೆ ಸಹೃದಯಿ ದಾನಿಗಳ ನೆರವು ಬೇಕಾಗಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯವನ್ನು ರಕ್ಷಿತ್ ಗೆ ಮಾಡಬೇಕಾಗಿ ಈ ಮೂಲಕ ರಕ್ಷಿತ್ ನ ಕುಟುಂಬದವರೂ ಊರಿನವರೂ ಕೃತಜ್ಞತಾಪೂರ್ವಕವಾಗಿ ಕೋರಿಕೊಂಡಿದ್ದಾರೆ.

 

 

(Due to some reason the Account Number and contact information have been removed)

 

 

 

Leave a Comment