What is the purpose of NATO? What is the work of NATO?

NATO ಸದಸ್ಯ ರಾಷ್ಟ್ರಗಳು ಕೇವಲ ಸದಸ್ಯರಾಗಿಯೇ ಉಳಿಯುವುದಿಲ್ಲ. ಬದಲಾಗಿ ಪರಸ್ಪರ ರಕ್ಷಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ

NATO ನ ಸದಸ್ಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಕಷ್ಟ ಸುಧಾರಣೆಗೆ, ಭಯೋತ್ಪಾದನಾ ನಿರ್ಮೂಲನೆಗೆ, ಮತ್ತು ಸೈಬರ್ ದಾಳಿಯ ತಡೆಗೆ ಈ NATO ಪಡೆ ಕೆಲಸ ಮಾಡಬೇಕಾಗುತ್ತದೆ

ಜೊತೆಗೆ ಈ ರಾಷ್ಟ್ರಗಳ ಸ್ವಾತಂತ್ರ ಮತ್ತು ಮಿಲಿಟರಿ ಕಾರ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ.

NATO  ಸದಸ್ಯ ರಾಷ್ಟ್ರಗಳ ಪೈಕಿ ಯಾವುದಾದರೊಂದು ದೇಶಕ್ಕೂ ಮಿಲಿಟರಿ ದಾಳಿ ಆದರೂ ಉಳಿದೆಲ್ಲ NATO  ಸದಸ್ಯ  ಆ ಒಂದು ದೇಶದ ರಕ್ಷಣೆಗೆ ಧಾವಿಸಬೇಕು. ಮತ್ತು ರಕ್ಷಣೆಗೆ ನಿಲ್ಲಬೇಕು.

ಇದು NATO  ನ Article 5ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ NATO  ಪಡೆ ಯಾವತ್ತೂ ಸ್ವತಹ ತಾವೇ ಸೇರಿಕೊಂಡು ಬೇರೆ ದೇಶಕ್ಕೆ ಯುದ್ಧ ಹೋಗುವಂತಿಲ್ಲ.

ಒಂದು ಇನ್ನೊಂದು ದೇಶಕ್ಕೆ ರಕ್ಷಣೆಯಾಗಿ ನಿಲ್ಲಬೇಕು ಮತ್ತು ಸದಾ ರಕ್ಷಣೆಗೆ ಸಿದ್ಧವಿರಬೇಕು. NATO ನ ಸದಸ್ಯ ರಾಷ್ಟ್ರವಲ್ಲದ ಯಾವುದೇ ದೇಶ ಅತೀವ ಆರ್ಥಿಕ ಸಂಕಷ್ಟಕೊಳಗಾದರೆ ಅಥವಾ ಭಯೋತ್ಪಾದಕ ದಾಳಿಗೆ ಒಳಗಾದರೆ ಅಂತಹ ದೇಶಕ್ಕೆ ಒಮ್ಮತದ ಮೂಲಕ NATO ಸದಸ್ಯ ರಾಷ್ಟ್ರಗಳು ಸಹಾಯಕ್ಕೆ ಬರಬಹುದು

ಯಾವುದೇ ಸದಸ್ಯ ರಾಷ್ಟ್ರಗಳ ಆಂತರಿಕ ದಂಗೆ ಗೆ  NATO ಸದಸ್ಯ ರಾಷ್ಟ್ರಗಳು ಮಧ್ಯ ಪ್ರವೇಶಿಸುವುದಿಲ್ಲ. ಉದಾಹರಣೆಗೆ 2016 ರಲ್ಲಿ ಟರ್ಕಿಯಲ್ಲಿ ನಡೆದ ಆಂತರಿಕ ಕಲಹವನ್ನು ನೀವು ಗಮನಿಸಬಹುದು. ಟರ್ಕಿ NATO ಪಡೆಯ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದರು ಸಹ ಆ ಸಮಯದಲ್ಲಿ NATO ಮಧ್ಯ ಪ್ರವೇಶಿಸಲಿಲ್ಲ.