ಸುಮೇದ್ ನಲ್ಲಿರುವ ಅದ್ಭುತ ಡಾನ್ಸ್ ಪ್ರತಿಭೆಯು ನಂತರ ಆತನನ್ನು Dance India Dance ಗೆ ಸೆಲೆಕ್ಟ್ ಆಗುವಂತೆ ಮಾಡುತ್ತದೆ
ಡಾನ್ಸ್ ಇಂಡಿಯಾ ಡಾನ್ಸ್ ನಲ್ಲಿ ಎಲ್ಲರ ಗಮನವನ್ನು ಸೆಳೆಯುದರ ಜೊತೆ ಆತನಲ್ಲಿರುವ ನಟನಾ ಕಲೆಯೂ ಜಗತ್ತಿಗೆ ಪರಿಚಯವಾಗುತ್ತದೆ
ಸ್ಟಾರ್ ಭಾರತದಲ್ಲಿ ಪ್ರಸಾರವಾಗಳು ಪೌರಾಣಿಕ ಧಾರಾವಾಹಿ ರಾಧಾ ಕೃಷ್ಣ ದ ಕೃಷ್ಣನ ಪಾತ್ರಕ್ಕೆ ಸುಮೇದ್ ಆಯ್ಕೆಯಾಗುತ್ತಾರೆ
ಪಾತ್ರವನ್ನು ನಿಭಾಯಿಸುವುದು ಸುಮೇದ್ ಗೆ ಬಹಳ ದೊಡ್ಡ ಸವಾಲಾಗಿತ್ತು. ಈ ಪಾತ್ರಕ್ಕೆ ತನ್ನಿಂದ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಭಯ ಸುಮೇದ್ ನಲ್ಲಿತ್ತು
ಸುಮೇದ್ ಗೆ ನೀಲಿ ಬಣ್ಣ ಅಂದರೆ ಅಚ್ಚುಮೆಚ್ಚು. ಆತನ ಹೆಚ್ಚಿನ ಎಲ್ಲಾ ಫೋಟೋಗಳು ನೀಲಿ ಡ್ರೆಸ್ ನಲ್ಲೆ ಇರುವುದು ಈತನಿಗೆ ನೀಲಿ ಬಣ್ಣದಲ್ಲಿರುವ ಮೋಹವನ್ನು ತೋರಿಸುತ್ತದೆ.
ಸುಮೇದ್ ನ ಫೇವರಿಟ್ ಹೀರೋಯಿನ್ ದೀಪಿಕಾ ಪಡುಕೋಣೆ. ತನ್ನ ಫೇವರಿಟ್ ಹೀರೋಯಿನ್ ಜೊತೆ ಒಂದಾದರೂ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆಯನ್ನು ಸುಮೇದ್ ಒಂದು ಬಾರಿ ಇಂಟರ್ವ್ಯೂನಲ್ಲಿ ಹೇಳಿದ್ದ.