NATO Full Information in Kannada 2022

NATO ಅಂದರೆ ಏನು? NATO ಪಡೆಯ ಸದಸ್ಯ ರಾಷ್ಟ್ರಗಳು ಯಾವುವು?

ಸದ್ಯ ಜಗತ್ತಿನಲ್ಲಿ ಬಿಸಿ ಬಿಸಿ ಸುದ್ದಿ ಮತ್ತು ದುಃಖಕರ ವಿಷಯ ಎಂದರೆ Russia ಮತ್ತು Ukriane ನ ನಡುವಣ ಯುದ್ಧ (Russia-Ukraine War).

ಈಗ ತಾನೇ ಇಡೀ ಜಗತ್ತು ಎರಡೆರಡು ಬಾರಿ ಕೋರೋಣ ಹೆಮ್ಮಾರಿಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮೂರನೇ ಮಹಾ ಯುದ್ಧಕ್ಕೆ ನಾಂದಿ ಹಾಡುವಂತೆ ಕಾಣುತ್ತಿರುವ Russia Ukraine War ಇಡೀ ಜಗತ್ತನ್ನೇ ಬೆಕ್ಕಸ ಬೆರಗಾಗಿಸಿದೆ

ಏನು ಎತ್ತ ಎಂದು ತಿಳಿದು ಕೊಳ್ಳುವಷ್ಟರಲ್ಲಿ ಸಾವಿರಾರು ಜೀವಗಳು ಸತ್ತು ಬಿದ್ದಿವೆ, ಲಕ್ಷ ಕೋಟಿಗಟ್ಟಲೆ ಸಾರ್ವಜನಿಕ ಆಸ್ತಿಗಳು ಧ್ವಂಸಗೊಂಡಿವೆ.

ಕೋರೋಣ ಸಂಕಷ್ಟ, ಭಯೋತ್ಪಾದನೆಯಿಂದ ಅದಾಗಲೇ ನಲುಗಿದ ಜಗತ್ತು ಇನ್ನಷ್ಟು ಸೊರಗುವಂತಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವ ಜೊತೆ ಕೊರೊನದಿಂದ ಗೆಲ್ಲುವ ಈ ನಡುವೆ ತನ್ನ ಸ್ವ ಪ್ರತಿಷ್ಠೆಗಾಗಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು ವಿಪರ್ಯಾಸವೇ ಸರಿ.

ಜಗತ್ತಿನಲ್ಲಿ ನಡೆಯುವ ಭಯೋತ್ಪಾದನಾ ದಾಳಿಗಳಾಗಲಿ, ಬಂಡುಕೋರರ ದಾಳಿಗಳಾಗಲಿ,  ಯುದ್ಧಗಳಾಗಲಿ ಏನೇ ನಡೆದರೂ ಮಧ್ಯ ಪ್ರವೇಶಿಸುವ NATO ಪಡೆ ಇಂದು ಏಕೆ ರಷ್ಯಾವನ್ನು ದಮನಿಸಲು ಬರಲಿಲ್ಲ, ಉಕ್ರೇನ್ ಅನ್ನು ಯಾಕೆ ರಕ್ಷಿಸಲು ಮುಂದಾಗಲಿಲ್ಲ.

ಅಷ್ಟಕ್ಕೂ NATO ಅಂದರೆ ಏನು? NATO ನ ಕೆಲಸ ಏನು? ಎಂಬಿತ್ಯಾದಿ ಪ್ರಶ್ನೆಗಳು ಈಗ ಎಲ್ಲೆಡೆ ಸರ್ವೇ ಸಾಮಾನ್ಯ. ಈ ಲೇಖನದಲ್ಲಿ ಈ ಎಲ್ಲಾ ಗೊಂದಲಗಳಿಗೆ ಉತ್ತರ ನೀಡಲಾಗಿದೆ