ಗರುಡ ಗಮನ ವೃಷಭ ವಾಹನ

ಶಿವನಾಗಿ ರಾಜ್ ಬಿ ಶೆಟ್ಟಿ ಹರಿಯಾಗಿ ರಿಷಬ್ ಶೆಟ್ಟಿ ಶೇಖರನಾಗಿ ದೀಪಕ್ ರೈ ಪಾಣಾಜೆ ಮತ್ತು ಇನ್ನಿತರ ತುಳುನಾಡಿನ ಕಲಾವಿದರು ಸೇರಿ ಕನ್ನಡದ ಹಿರಿಯ ಕಲಾವಿದರ ನಟನೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ

ಕಥೆ ಮಂಗಳೂರಿನ ರೌಡಿಸಂ ನ ಸುತ್ತ ಸುಳಿಯುತ್ತದೆ. ಶಿವನ ಕೈಯಲ್ಲಿ ಕೊಲೆಗಳು ನಡೆಯುತ್ತವೆ. ಕಥೆಯು ಮಂಗಳೂರಿನ ಒಂದು ಸಾಂಸ್ಕೃತಿಕ ನಗರಿ ಎಂದು ಎನಿಸಿಕೊಂಡಿರುವ ನಗರ ಮಂಗಳಾದೇವಿ ಯ ಸುತ್ತ ಸುತ್ತುತ್ತದೆ

ರಿಷಬ್ ಶೆಟ್ಟಿ ಹರಿಯಾಗಿ, ಶಾಂತ ಮತ್ತು ಮುಗ್ಧನಾಗಿ ನಂತರ ಶಿಸ್ತಿನ ಮನುಷ್ಯನಾಗಿ, ಖಡಕ್ಕಾಗಿ ಇರುತ್ತಾನೆ. ಗೆಳೆಯನ ಪ್ರೀತಿಗೆ ಸೋತಿರುತ್ತಾನೆ  

Achievement

GGVV ಸಿನಿಮಾಕ್ಕೆ FCGold ಗೌರವ

ನಾಯಕಿ ಇಲ್ಲದೆ, ಲವ್ ಹಾಡು ಇಲ್ಲದೆ ಮತ್ತು ಕ್ಯಾಬರೆ ದೃಶ್ಯ ಇಲ್ಲದೆ ಕೇವಲ ಕಥೆ ಮತ್ತು ಅದನ್ನು ಪ್ರಸ್ತುತ ಪಡಿಸಿದ ರೀತಿ ಮತ್ತು ಪ್ರತಿಯೊಂದು ಪಾತ್ರದ ಅದ್ಭುತ ನಟನೆಯು ಗರುಡ ಗಮನ ವೃಷಭ ವಾಹನ  ಚಿತ್ರವನ್ನು ಗೆಲ್ಲುವಂತೆ ಮಾಡಿದೆ