ಜೇಮ್ಸ್ ಅಬ್ಬರಕ್ಕೆ ದಂಗಾದ ದೇಶದ ಸಿನಿ ಜಗತ್ತು | ಮೊದಲ ದಿನವೇ ದಾಖಲೆ ಬರೆದ ಅಪ್ಪು ನಟನೆಯ ಜೇಮ್ಸ್ ಚಿತ್ರ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವಂತ ಇಲ್ಲದಿದ್ದರೂ ಅವರ ಸಿನಿಮಾದ ಅಬ್ಬರ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ
ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾದ ಅವರ ನಟನೆಯ ಅದ್ಧೂರಿ ಸಿನಿಮಾ ‘ಜೇಮ್ಸ್’ ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನವೇ ಸುಮಾರು 30 ಕೋಟಿ ರೂಪಾಯಿ ಬಾಚುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಕಡೆಯಲ್ಲೆಲ್ಲ ಭರ್ಜರಿ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ
ಅಪ್ಪು ಅವರ ಅಭಿಮಾನಿಗಳು, ಸಿನಿ ರಸಿಕರು ತಮ್ಮ ನೆಚ್ಚಿನ ನಟನ ಅಗಲಿಕೆ ನೋವಿನಲ್ಲಿಯೂ ಮುಗಿಬಿದ್ದು ಸಿನಿಮಾ ವೀಕ್ಷಿಸಿ ಪುನೀತ್ ಅವರಿಗೆ ಪ್ರೀತಿ ತೋರಿಸಿದ್ದಾರೆ
ಎಲ್ಲೆಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ. ಎರಡನೇ ದಿನವೂ ಚಿತ್ರ ಮಂದಿರಗಳ ಬಳಿ ಬೆಳಿಗ್ಗೆಯಿಂದಲೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ
ದೇಶಾದ್ಯಂತ ಸುಮಾರು 4000 ಥೀಯೇಟರ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಜೇಮ್ಸ್ ಚಿತ್ರದ ಅಬ್ಬರಕ್ಕೆ ಇಡೀ ದೇಶವೇ ಚಂದನವನದತ್ತ ತಿರುಗುವಂತೆ ಮಾಡಿದೆ.
Read More
coolinglass.com