James Movie First Day Collection | ಜೇಮ್ಸ್ ಅಬ್ಬರಕ್ಕೆ ದಂಗಾದ ದೇಶದ ಸಿನಿ ಜಗತ್ತು | ಮೊದಲ ದಿನವೇ ದಾಖಲೆ ಬರೆದ ಅಪ್ಪು ನಟನೆಯ ಜೇಮ್ಸ್ ಚಿತ್ರ

James Movie first Day Collection: ಜೇಮ್ಸ್ ಅಬ್ಬರಕ್ಕೆ ದಂಗಾದ ದೇಶದ ಸಿನಿ ಜಗತ್ತು | ಮೊದಲ ದಿನವೇ ದಾಖಲೆ ಬರೆದ ಅಪ್ಪು ನಟನೆಯ ಜೇಮ್ಸ್ ಚಿತ್ರ

James Movie first Day Collection: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವಂತ ಇಲ್ಲದಿದ್ದರೂ ಅವರ ಸಿನಿಮಾದ ಅಬ್ಬರ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾದ ಅವರ ನಟನೆಯ ಅದ್ಧೂರಿ ಸಿನಿಮಾ ‘ಜೇಮ್ಸ್’ ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದಿದೆ. ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನವೇ ಸುಮಾರು 30 ಕೋಟಿ ರೂಪಾಯಿ ಬಾಚುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಕಡೆಯಲ್ಲೆಲ್ಲ ಭರ್ಜರಿ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ. ಅಪ್ಪು ಅವರ ಅಭಿಮಾನಿಗಳು, ಸಿನಿ ರಸಿಕರು ತಮ್ಮ ನೆಚ್ಚಿನ ನಟನ ಅಗಲಿಕೆ ನೋವಿನಲ್ಲಿಯೂ ಮುಗಿಬಿದ್ದು ಸಿನಿಮಾ ವೀಕ್ಷಿಸಿ ಪುನೀತ್ ಅವರಿಗೆ ಪ್ರೀತಿ ತೋರಿಸಿದ್ದಾರೆ. ಎಲ್ಲೆಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ. ಎರಡನೇ ದಿನವೂ ಚಿತ್ರ ಮಂದಿರಗಳ ಬಳಿ ಬೆಳಿಗ್ಗೆಯಿಂದಲೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. 

James Movie first Day Collection (1)

ದೇಶಾದ್ಯಂತ ಸುಮಾರು 4000 ಥೀಯೇಟರ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಜೇಮ್ಸ್ ಚಿತ್ರದ ಅಬ್ಬರಕ್ಕೆ ಇಡೀ ದೇಶವೇ ಚಂದನವನದತ್ತ ತಿರುಗುವಂತೆ ಮಾಡಿದೆ. ಮೊದಲ ದಿನವೇ ಚಿತ್ರ ಪ್ರೇಮಿಗಳು ಅಭಿಮಾನಿಗಳು ವೀಕ್ಷಕರು ಥೀಯೇಟರ್ ಗಳಿಗೆ ಮುಗಿಬಿದ್ದ ದೃಶ್ಯವೇ ಅಮೋಘವಾಗಿತ್ತು. ಥೀಯೇಟರ್ ಗಳ ಹತ್ತಿರ ಪುನೀತ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಚಿತ್ರವನ್ನು ವೀಕ್ಷಿಸಿದರು. ಚಿತ್ರ ಎರಡನೇ ದಿನವೂ ಪ್ರತೀ ಥೀಯೇಟರ್ ಗಳೂ ಹೌಸ್ ಫುಲ್ ಆಗಿ ಓಡುತ್ತಿದೆ. ಚಿತ್ರದ ಯಶಸ್ಸಿಗೆ ಪುನೀತ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿ ಜೊತೆ ಅವರು ತಮ್ಮ ಚಿತ್ರಗಳಿಗೆ ಕೊಡುತ್ತಿದ್ದ ಸಮರ್ಪನಾ ಭಾವ ಚಿತ್ರದಲ್ಲಿ ತಮ್ಮ ಪಾತ್ರವನ್ನು ಜೀವಂತವವಾಗಿರುವಂತೆ ಮಾಡುತ್ತದೆ ಎಂದು ಚಿತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.  

 

ಸ್ಯಾಂಡಲ್​ ವುಡ್ ನ ಇತಿಹಾಸದಲ್ಲಿಯೇ ಪುನೀತ್ ನಟನೆಯ ಜೇಮ್ಸ್​ ಚಿತ್ರವು ಐತಿಹಾಸಿಕ ಸಾಧನೆ ಮಾಡಿದೆ. ಮೂಲಗಳ ಪ್ರಕಾರ ಯಶ್ ನಟನೆಯ ಕೆ.ಜಿ.ಎಫ್ ದಾಖಲೆಯನ್ನು ಜೇಮ್ಸ್​ ಚಿತ್ರವು ಹಿಂದಿಕ್ಕಿದೆ ಎಂದು ಹೇಳಲಾಗಿದೆ. ಕೆಲವು ಅಂದಾಜಿನ ಪ್ರಕಾರ ಕೆಜಿಎಫ್ ಮೊದಲ ದಿನ‌ದ ಗಳಿಕೆಯು 25 ಕೋಟಿ ರೂ. ಆಗಿತ್ತು. ಆದರೆ ಇದೀಗ ಈ ದಾಖಲೆಯನ್ನು ಅಪ್ಪು ಅಭಿನಯದ ಜೇಮ್ಸ್​ ಚಿತ್ರವು 30 ಕೋಟಿ ಗಳಿಕೆ ಮಾಡುವ ಮೂಲಕ ಮುರಿದಿದೆ. ಜೇಮ್ಸ್​ ಚಿತ್ರವು ಮೊದಲ ವಾರವೇ ಸುಮಾರು 100 ಕೋಟಿ ರೂಪಾಯಿ ಗಳಿಸಬಹುದು ಎಂದು ಚಿತ್ರ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 

Read Also:

ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಹುಟ್ಟಿಕೊಂಡ ಎಲ್ಲಿಲ್ಲದ ಕ್ರೇಜ್ 

ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಂಡಿದ್ದು, ಪುನೀತ್ ರಾಜ್ ಕುಮಾರ್ ಅವರ ಮೇಲಿರುವ ಅತೀವ ಅಭಿಮಾನ ದಿಂದಾಗಿ ಜೇಮ್ಸ್ ಚಿತ್ರವೂ ಚಂದನವನದ ಎಲ್ಲಾ ದಾಖಲೆಗಳನ್ನು ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿದೆ. ಚಿತ್ರದ ಬಿಡುಗಡೆಗೆ ಮುನ್ನ ದಿನವೇ ಎಲ್ಲಾ ಟಿಕೆಟ್ ಗಳೂ ಮಾರಾಟವಾಗಿದೆ. ಅದೆಷ್ಟೋ ಸಹಸ್ರಾರು ಜನ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರವರನ್ನು ದೇವರೆಂದು ಪೂಜಿಸುತ್ತಿದ್ದು ಅವರು ಅಭಿನಯಿಸಿದ ಕೊನೆಯ ಚಿತ್ರಕ್ಕೆ ಹೃದಯ ತುಂಬಿ ಹರಸುತ್ತಿದ್ದಾರೆ. ಅದಲ್ಲದೆ ಇವತ್ತು ಎಲ್ಲಾ ಮಾಧ್ಯಮ ಗಳಲ್ಲೂ, ಜಾಲತಾಣದಲ್ಲೂ ಜೇಮ್ಸ್ ಚಿತ್ರದ್ದೇ ಹವಾ Read More…..

ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿಗೆ ನ್ಯಾಯ ಕೋರಿ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ

  ”SUSHANT BRUTALLY MURDERED” ಎಂಬ ಹ್ಯಾಸ್ ಟ್ಯಾಗ್ ಟ್ವಿಟರ್ ತುಂಬಾ ಹರಿದಾಡುತ್ತಿದ್ದು Sushant Singh Rajput ಅವರ ಸಾವಿಗೆ ನ್ಯಾಯ ಕೋರಿ ಇದೇ ತಿಂಗಳು ಮಾರ್ಚ್ 27 ರಂದು ದೇಶಾದ್ಯಂತ ಪ್ರತಿಭಟನೆ ಮಾಡಲು ಸುಶಾಂತ್ ಸಿಂಗ್ ರಾಜಪುತ್ ಅವರ ಅಭಿಮಾನಿ ಬಳಗ ಮತ್ತು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸರಕಾರ ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿನ ತನಿಖೆ ಮಾಡಬೇಕು ಮತ್ತು Sushant Singh Rajput ಅವರಿಗೆ ನ್ಯಾಯ ಒದಗಿಸಬೇಕು ಮತ್ತು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಹಾಗಾಗಿ ಸದ್ಯ SUSHANT BRUTALLY MURDERED ಹ್ಯಾಸ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ  Read More…..

Best Insurance Policies that everyone to have in 2022

Best Insurance Policies in 2022: While there are numerous types of life insurance, they fall into one of two categories: annuity and universal. An annuity is a fixed-term investment, with the possibility of receiving periodic payments for your life. An annuity can be purchased on a fixed-term basis or at a fixed rate Read More…

 

Leave a Comment