ತುಳು ಕಿರುಚಿತ್ರ ”ಮೋಕ್ಷ” ದ ಪೋಸ್ಟರ್ ರಿಲೀಸ್ ಮಾಡಿದ ತುಳು ಮತ್ತು ಕನ್ನಡ ಚಲನಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ


 

ಮಂಗಳೂರಿನ ಉತ್ಸಾಹಿ ಯುವಕರ ತಂಡದಿಂದ ಹೊಸ ತುಳು ಕಿರುಚಿತ್ರ ಮೋಕ್ಷ ಇದರ ಎರಡನೇ ಪೋಸ್ಟರ್ ನ್ನು ತುಳು ಮತ್ತು ಕನ್ನಡ ಚಲನಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಡುಗಡೆಗೊಳಿಸಿದ್ದು ಕಿರುಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಮೋಕ್ಷ ಕಿರುಚಿತ್ರವು ಲಕ್ಷ್ಮಿ ಕ್ರಿಯೇಶನ್ಸ್ ಕ್ರಿಯೇಟಿವ್ ಫಿಲಂಸ್ ಅರ್ಪಿಸುವ ಮನಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಕ್ಷ್ಮಿ ದಯಾನಂದ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೇಯಸ್ ಕುಲಾಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೋಕ್ಷ ತುಳು ಕಿರುಚಿತ್ರ ವು ಇದೇ ತಿಂಗಳು (ಆಗಸ್ಟ್ ನಲ್ಲಿ) 19 ರಂದು ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, 11 ರಂದು ಟೀಸರ್ ರಿಲೀಸ್ ಮಾಡಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

 

ನಾಯಕ ನಟನಾಗಿ ಸುಕೇಶ್ ಗೌಡ ಅಭಿನಯಿಸಿದ್ದು ಅವರಿಗೆ ನಾಯಕಿಯಾಗಿ ರಶ್ಮಿ ಅಮೀನ್ ಸಾಥ್ ನೀಡಿದ್ದಾರೆ. ಈ ಕಿರುಚಿತ್ರಕ್ಕೆ ಕಥೆ ಚಿತ್ರಕಥೆಯನ್ನು ಶ್ರೇಯಸ್ ಕುಲಾಲ್ ಬರೆದಿದ್ದು, ಮಾರುತಿ ರಾವ್ ಕ್ಯಾಮೆರಾ ಮತ್ತು ಸಂಕಲನವನ್ನು ಮಾಡಿದ್ದಾರೆ. ಈ ಚಿತ್ರವು ಥ್ರಿಲ್ಲರ್ ಮತ್ತು ಸೆಂಟಿಮೆಂಟ್ ನ ವಿಭಿನ್ನ ಕಥಾಹಂದರ ಹೊಂದಿದ್ದು ವೀಕ್ಷಕರಿಗೆ ಮನರಂಜನೆಗೆ ಯಾವುದೇ ಮೋಸ ಆಗುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಡಿ.ಐ ಜವಾಬ್ದಾರಿಯನ್ನು ಸುಬ್ಬು ವಹಿಸಿದರೆ, ವಿಎಫ್ಎಕ್ಸ್ ಅನ್ನು ಮಧು ಮಾಡಿದ್ದಾರೆ. ಸಂಗೀತ ಸೂರಿ ವಹಿಸಿಕೊಂಡಿದ್ದಾರೆ. ಉಳಿದಂತೆ ಪಾತ್ರವರ್ಗದಲ್ಲಿ ರೋಹನ್ ದೇವಾಡಿಗ, ಭರತ್, ಲೋಕೇಶ್ ಕುಲಾಲ್, ಕುಮಾರ್ ಮಾಲೇಮಾರ್, ಹರಿದೀಪ್ ರೈ, ಕಾವ್ಯ ಅಮೀನ್ ಇದ್ದಾರೆ.

 

Read Also : ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಬಿಡುಗಡೆ ಮಾಡಲಿರುವ ”ಗ್ರೂಫಿ” ಸಿನಿಮಾದ ಧ್ವನಿ ಸುರುಳಿ

 

 

Amazon Great Independence Day Sale

 

 

 


Leave a Comment

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music