Lucknow: ಒಂಟಿ ಮಹಿಳೆಯ ಸೆರಗು ಎಳೆದು ಅನುಚಿತ ವರ್ತನೆ ತೋರಿದ ಯುವಕನಿಗೆ ಮಹಿಳೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸುತ್ತಿದ್ದಾಳೆ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಹೌದು ಈ ವಿಡಿಯೋ ನೋಡಿದ ತಕ್ಷಣ ಎಂಥವರಿಗಾದರೂ ಅದೇ ಅನಿಸುತ್ತದೆ. ಮೇಲಾಗಿ ಆ ಮಹಿಳೆಯ ದೂರು ಕೂಡ ಅದೇ ಆಗಿದೆ. ನೈಜ ಘಟನೆ ಬೇರೇನೇ ಇದೆ. Lucknow girl slapping

ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಲಕ್ನೋ ದಲ್ಲಿ. ಈ ವಿಡಿಯೋ ದಲ್ಲಿ ಕಾಣುವ ಮಹಿಳೆ ರಾತ್ರೆ ಹೊತ್ತು ಕಿಕ್ಕಿರಿದು ವಾಹನಗಳಿಂದ ತುಂಬಿದ್ದ ರಸ್ತೆಯನ್ನು ದಾಟಲು ಮುಂದಾಗುತ್ತಾಳೆ. ಅಷ್ಟೊಂದು ವಾಹನಗಳಿದ್ದರು ಹಾಗೋ ಹೀಗೋ ಕೆಲವು ವಾಹನಗಳನ್ನು ತಪ್ಪಿಸಿಕೊಂಡು ಕೇರ್ ಅನ್ನದ ಮಹಿಳೆ ನೇರ ನಡು ರಸ್ತೆಗೆ ತಲುಪುತ್ತಲೇ. ಅಷ್ಟೊತ್ತಿಗೆ ಮತ್ತೊಂದು ಕಾರು ಬರುತ್ತದೆ. ಅದನ್ನು ಕಂಡು ಕಾಣದಂತೆ ಆ ಕಾರಿಗೆ ಅಡ್ಡಲಾಗಿ ನಿಲ್ಲುತ್ತಾಳೆ. ತನ್ನ ಸಮಯ ಪ್ರಜ್ಞೆಯಿಂದ ಆ ಕಾರಿನ ಚಾಲಕ ಅವಳನ್ನು ಕಾರಿಗೆ ಡಿಕ್ಕಿ ಹೊಡೆಯುವುದರಿಂದ ತಪ್ಪಿಸಿಕೊಳ್ಳಲು ನೇರವಾಗಿ ಬ್ರೇಕ್ ಅದುಮಿ ಕಾರನ್ನು ನಿಲ್ಲಿಸುತ್ತಾನೆ. Lucknow girl slapping
A video of a girl slapping a cabbie repeatedly in full public glare has gone viral. The girl alleged that the driver hit her with car & had misbehaved after the incident. However, the CCTV footage of incident shows something opposite. So, who was right? Watch to find out.#NewsMo pic.twitter.com/7luxAVLDVx
— IndiaToday (@IndiaToday) August 3, 2021
ಸಂಭಾವ್ಯ ಅಪಘಾತದಿಂದ ತಪ್ಪಿಸಿದ್ದಕ್ಕೆ ಆ ಕಾರಿನ ಚಾಲಕನಿಗೆ ಕೃತಜ್ಞತೆ ಹೇಳುವ ಬದಲು ಅವನ ಮೇಲೆಯೇ ಎರಗಿ ಬೀಳಲು ಮುಂದಾಗುತ್ತಾಳೆ. ಕಾರಿನ ಚಾಲಕನಿಗೆ ಹಿಗ್ಗಾಮುಗ್ಗಾ ಬಯ್ಯಲು ಆರಂಭಿಸಿದ ಈಕೆ ಚಾಲಕನನ್ನು ಕಾರಿನಿಂದ ಇಳಿಸಿ ಮನ ಬಂದಂತೆ ಬೈದಿದ್ದು ಮಾತ್ರವಲ್ಲದೆ ನಡು ರಸ್ತೆಯಲ್ಲಿ ಎಗರಿ ಎಗರಿ ಕಪಾಳಕ್ಕೂ ಭಾರಿಸುವ ಮೂಲಕ ದುರ್ವರ್ತನೆ ತೋರಿದ್ದಾಳೆ.
ಮೊದಲು ಈಕೆ ಹೇಳುತ್ತಿರುವುದು ಸತ್ಯ ಎಂದು ಭಾವಿಸಿದ ಎಲ್ಲರು ಈಕೆಗೆ ಸಪೋರ್ಟ್ ಆಗಿ ನಿಂತ ಜನಗಳು ಆ ಬಡಪಾಯಿ ಕ್ಯಾಬ್ ಚಾಲಕನ ಸಹಾಯಕ್ಕೆ ಯಾರೂ ಬರುವುದಿಲ್ಲ. ಆದರೆ ಈ ಎಲ್ಲಾ ಘಟನೆಯ ನೈಜತೆ ಬಯಲಾಗಿದ್ದು ಸಿಸಿ ಟಿವಿ ಫೂಟೇಜ್ ಬಯಲಾದಾಗ. ಸಿಸಿ ಕ್ಯಾಮೆರಾ ದಲ್ಲಿ ಆ ರಸ್ತೆಯ ಸಂಚಾರವು ದಾಖಲಾಗಿದ್ದು. ಅದರಲ್ಲಿ ಆಕೆ ವಿನಾ ಕಾರಣ ಈ ಕ್ಯಾಬ್ ಚಾಲಕನ ಮೇಲೆ ಅಪವಾದ ಹೊರಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಘಟನೆ ಇನ್ನು ತನಿಖೆಯಲ್ಲಿದ್ದು. ನಿಜವಾದ ತಪ್ಪು ಯಾರದ್ದೆಂದು ತನಿಖೆಯಲ್ಲಿ ಬಯಲಾಗಲಿದೆ.
1 thought on “Lucknow girl slapping viral video :ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ಯುವಕನಿಗೆ ಎರ್ರಾಬಿರ್ರಿ ಥಳಿಸುವ ವಿಡಿಯೋ ವೈರಲ್”