ಟೋಕಿಯೋ : ಸೆಮಿಫೈನಲ್ ನಲ್ಲಿ ಸೋಲನುಭವಿಸಿದ್ದರೂ ಪದಕದ ಅಸೆ ಇನ್ನೂ ಜೀವಂತ ಉಳಿಸಿದ್ದ ಭಾರತ ಹಾಕಿ ತಂಡ ತಮ್ಮ ಮೇಲಿದ್ದ ಅಪಾರ ಕ್ರೀಡಾಭಿಮಾನಿಗಳ ಭರವಸೆಯನ್ನು ಹುಸಿಗೊಳಿಸಲಿಲ್ಲ. ಭಾರತಕ್ಕೆ ಪ್ರಸ್ತುತ ಒಲಿಂಪಿಕ್ಸ್ ನಲ್ಲಿ ಇನ್ನೊಂದು ಪದಕ ಗೆಲ್ಲಿಸಿಕೊಡುವಲ್ಲಿ ಸಫಲರಾಗಿದ್ದಾರೆ. ಭಾರತಕ್ಕೆ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಕಂಚಿನ ಪದಕ ಮುಡಿಗೇರಿಸಿಕೊಳ್ಳುವದರ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕದ ಸಾಧನೆಯನ್ನು ಮಾಡಿದೆ. ಮನ್ಪ್ರೀತ್ ಸಿಂಗ್ ರ ನಾಯಕತ್ವದ ಭಾರತ ಹಾಕಿ ತಂಡವು ಪ್ರಸ್ತುತ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಇನ್ನೊಂದು ಹಂತ ಮೇಲೇರುವಂತೆ ಮಾಡಿದೆ. (Indian hockey team won bronze medal)

Indian hockey team won bronze medal against germany
ಆರಂಭದಲ್ಲಿ 1 – 3 ಹಿನ್ನಡೆ ಅನುಭವಿಸಿದ್ದ ಭಾರತ ಪುರುಷರ ಹಾಕಿ ತಂಡವು, ನಂತರ 5 – 4 ಅಂಕಗಳ ಅಂತರದಲ್ಲಿ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿತು. ಆ ಮೂಲಕ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ಮುಡಿಗೇರಿಸಿಕೊಂಡಿತು. ಪಂದ್ಯದಲ್ಲಿ ಜರ್ಮನಿಯ ಫಾವರ್ಡ್ ಆಟಗಾರರ ಭಾರಿ ಹೊಡೆತಗಳನ್ನು ತಡೆದು ಭದ್ರ ಕೋಟೆಯನ್ನೇ ನಿರ್ಮಿಸಿದ್ದ ನಮ್ಮ ಗೋಲ್ ಕೀಪರ್ ಶ್ರೀಜೇಶ್, ಭಾರತ ತಂಡದ ಐತಿಹಾಸಿಕ ಗೆಲುವಿನಲ್ಲಿ ಮಹತ್ತರವಾದ ಪಾತ್ರವಹಿಸಿದರು. ಆ ಮೂಲಕ ಅಪಾರ ಕ್ರೀಡಾಭಿಮಾನಿಗಳ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದರು.
ಭಾರತ ಹಾಕಿ ತಂಡವು ಕೊನೆಯ ಬಾರಿ 1980 ರಲ್ಲಿ ಮೊಸ್ಕೊದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಇಂದು ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುತ್ತಿದ್ದಂತೆ ಭಾರತ ತಂಡದ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಅಲ್ಲದೆ, ಕೋಟ್ಯಾಂತರ ಅಭಿಮಾನಿಗಳ ಮೆಚ್ಚುಗೆಗೆ ಭಾರತ ಭಾಜನವಾಯಿತು.
ಕಂಚಿನ ಪದಕಕ್ಕೆ ಕೊರಳೊಡ್ಡಿ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು
ಕಂಚಿನದ ಪದಕದ ನಿರೀಕ್ಷೆಯಲ್ಲಿ ಬೆಳಗ್ಗೆ ಕಣಕ್ಕೆ ಇಳಿದ ಭಾರತ ತಂಡಕ್ಕೆ ಆರಂಭಿಕ ಎರಡನೇ ನಿಮಿಷಗಳಲ್ಲಿ ಜರ್ಮನಿಯು ಗೋಲಿನ ಖಾತೆ ತೆರೆದು ಆಘಾತ ನೀಡಿತು. ಭಾರತ ಗೋಲು ಗಳಿಸಿ ಸಮಬಲ ಸಾಧಿಸಲು ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಮೊದಲನೇ ಕ್ವಾರ್ಟರ್ನಲ್ಲಿ ಜರ್ಮನಿ 1-0 ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲವಾಗಿತ್ತು. ಭಾರತ ಯಾವುದೇ ಗೋಲುಗಳಿಲ್ಲದೆ ಮೊದಲನೇ ಕ್ವಾರ್ಟರ್ ಮುಗಿಸಬೇಕಾಯಿತು.
ಜಾವೆಲಿನ್ ಥ್ರೋ: ಮೊದಲ ಪ್ರಯತ್ನದಲ್ಲಿಯೇ ಫೈನಲ್ಗೇರಿದ ನೀರಜ್ ಚೋಪ್ರಾ!
ಆದರೆ ಎರಡನೇ ಕ್ವಾರ್ಟರ್ನ ಆರಂಭದಲ್ಲಿಯೇ ಸಿಮ್ರಾನ್ ಜೀತ್ ರವರು ಗೋಲಿನ ಖಾತೆ ತೆರೆದು ಜರ್ಮನಿ ಗೆ ಸಮಬಲ ತಂದುಕೊಟ್ಟರು. ನಂತರ 6 ನಿಮಿಷಗಳ ಅಂತರದಲ್ಲಿ ಜರ್ಮನಿ ಗೋಲು ಸಿಡಿಸಿ 2-1 ಮುನ್ನಡೆ ಪಡೆಯಿತು. ರಕ್ಷಣಾ ವಿಭಾಗದ ವೈಫಲ್ಯದಿಂದ ಜರ್ಮನಿಗೆ ಮತ್ತೊಂದು ಗೋಲು ಬಿಟ್ಟುಕೊಡಬೇಕಾಯಿತು. ಆ ಮೂಲಕ ಜರ್ಮನಿ 3 – 1 ಮುನ್ನಡೆ ಪಡೆಯಿತು. ಆದರೆ, ಭಾರತದ ಹಾರ್ದಿಕ್ ಸಿಂಗ್ ಹಾಗೂ ಹರ್ಮನ್ಪ್ರೀತ್ ಸಿಂಗ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಎರಡನೇ ಕ್ವಾರ್ಟರ್ ಅಂತ್ಯಕ್ಕೆ 3 – 3 ಗೋಲುಗಳ ಮೂಲಕ ಸಮಬಲ ಸಾಧಿಸಿತು.
India creates history. wins the Bronze medal in Field Hockey after 41 years
ಮೂರನೇ ಕ್ವಾರ್ಟರ್ ನಲ್ಲಿ ರೂಪಿಂದರ್ ಸಿಂಗ್ ಹಾಗೂ ಸಿಮ್ರಾನ್ಜೀತ್ ಅವರ ಭರ್ಜರಿ ಗೋಲುಗಳ ನೆರವಿನಿಂದ ಭಾರತ ತಂಡ ಮೂರನೇ ಕ್ವಾರ್ಟರ್ ಅಂತ್ಯಕ್ಕೆ 5-3 ಮುನ್ನಡೆ ಸಾಧಿಸಿತು. ನಂತರ ನಿರ್ಣಾಯಕ ನಾಲ್ಕನೇ ಕ್ವಾರ್ಟರ್ನಲ್ಲಿ ಒತ್ತಡದಲ್ಲಿ ಕಣಕ್ಕೆ ಇಳಿದ ಜರ್ಮನಿ ತಂಡ ಒಂದು ಗೋಲು ಮಾತ್ರ ಗಳಿಸಲು ಶಕ್ತವಾಯಿತು. ನಿರ್ಣಾಯಕ ನಿಮಿಷಗಳಲ್ಲಿ ಭದ್ರ ಕೋಟೆಯನ್ನೇ ನಿರ್ಮಿಸಿದ್ದ ಗೋಲ್ ಕೀಪರ್ ಶ್ರೀಜೇಶ್, ಜರ್ಮನಿ ಫಾವರ್ಡ್ ಆಟಗಾರರ ಬೆಂಕಿ ಚೆಂಡುಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ 5-4 ಅಂತರದಲ್ಲಿ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
A HISTORIC COMEBACK! 🥉🙌#IND men’s #hockey team came back 3-3 in the first-half against #GER and took the lead in the final 30 minutes to win the match 5-4 and the #bronze medal 🙌#Tokyo2020 | #UnitedByEmotion | #StrongerTogether pic.twitter.com/acZHNxR5Py
— #Tokyo2020 for India (@Tokyo2020hi) August 5, 2021