India In Tokyo Olympics:ಟೋಕಿಯೋ: ಭಾರತದ ಸ್ಟಾರ್ ಕ್ರೀಡಾಪಟು ನೀರಜ್ ಚೋಪ್ರಾ ಅವರು ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ಫೈನಲ್ ಗೆ ಆಟೋಮ್ಯಾಟಿಕ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಭಾರತಕ್ಕೆ ಇನ್ನೊಂದು ಪದಕದ ಭರವಸೆ ಮೂಡಿಸಿದ್ದಾರೆ.

photo credit to IndiaToday
ಜಾವೆಲಿನ್ ಥ್ರೋ ಪುರುಷರ ವಿಭಾಗದ ಫೈನಲ್ಗೆ ಅರ್ಹತೆ ಪಡೆಯಲು ಬೇಕಾದ ಕನಿಷ್ಠ 83.50 ಮೀಟರ್ ಜಾವೆಲಿನ್ ಎಸೆಯಬೇಕು ಅಥವಾ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಅಗ್ರ 12 ಜಾವೆಲಿನ್ ಥ್ರೋ ಪಟುಗಳನ್ನು ಆರಿಸಲಾಗುತ್ತದೆ. ಗುಂಪು ಎ’ ಮತ್ತು ಗುಂಪು ಬಿ ಯ ಒಟ್ಟು 12 ಮಂದಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ. India In Tokyo Olympics
ಕಂಚಿನ ಪದಕಕ್ಕೆ ಕೊರಳೊಡ್ಡಿ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು
ಈಗಾಗಲೇ ಗುಂಪು ಎ ಹಂತದ ಅರ್ಹತಾ ಸುತ್ತು ಮುಗಿದಿದ್ದು, ಇಂದು ತಡವಾಗಿ ಗುಂಪು ಬಿ ಯ ಅರ್ಹತಾ ಸುತ್ತು ನಡೆಯಲಿದೆ. ನೀರಜ್ ಚೋಪ್ರಾ ಗುಂಪು ‘ಎ’ ಹಂತದ ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನ ಪಡೆದಿದ್ದರು. ಆದರೆ, ತನ್ನ ಮೊದಲ ಪ್ರಯತ್ನದಲ್ಲಿಯೇ 86.65 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಅಚ್ಚರಿ ಮೂಡಿಸಿ ಫೈನಲ್ ಸುತ್ತಿಗೆ ಆಟೋಮ್ಯಾಟಿಕ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh