Raj Kundra controversy: Raj Kundra Case:
ಹೈಲೈಟ್ಸ್:
- ಅಶ್ಲೀಲ ಸಿನಿಮಾ ನಿರ್ಮಾಣ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ರಾಜ್ ಕುಂದ್ರಾ
- ರಾಜ್ ಕುಂದ್ರಾಗೆ ಜುಲೈ 27ರವರೆಗೆ ನ್ಯಾಯಾಂಗ ಬಂಧನ; ಮುಂದುವರಿದ ವಿಚಾರಣೆ
- ರಾಜ್ ಕುಂದ್ರಾ ಆಫೀಸ್ನಲ್ಲಿ ರಹಸ್ಯ ಬೀರು ಪತ್ತೆ!

ಅಶ್ಲೀಲ ಸಿನಿಮಾ ಮಾಡಿ, ಅದನ್ನು App ಮೂಲಕ ವಿತರಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಉದ್ಯಮಿ ರಾಜ್ ಕುಂದ್ರಾ ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ. ಜು.19ರಂದು ರಾಜ್ ಕುಂದ್ರಾರನ್ನು ಬಂಧಿಸಿ, ಅವರನ್ನು ಜುಲೈ 27ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಮಧ್ಯೆ ರಾಜ್ ಕುಂದ್ರಾ ಮನೆ ಮೇಲೂ ದಾಳಿ ಮಾಡಲಾಗಿದೆ. ಜೊತೆಗೆ ಅವರ ಕಚೇರಿಯಲ್ಲಿ ಒಂದು ರಹಸ್ಯ ಬೀರು ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ!
ಅಂಧೇರಿ ಪ್ರಾಂತ್ಯದಲ್ಲಿರುವ ರಾಜ್ ಕುಂದ್ರಾ ಅವರ ವಿಯಾನ್ & ಜೆಎಲ್ ಸ್ಟ್ರೀಮ್ ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಹುಡುಕಾಟ ನಡೆಸುವ ವೇಳೆ ಈ ರಹಸ್ಯ ಬೀರು ಪತ್ತೆಯಾಗಿದೆ. ‘ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್ಗೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ವಿಯಾನ್ & ಜೆಎಲ್ ಸ್ಟ್ರೀಮ್ ಕಚೇರಿಯಲ್ಲಿ ಹುಡುಕಾಟ ನಡೆಸುವಾಗ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳಿಗೆ ಒಂದು ರಹಸ್ಯ ಬೀರು ಪತ್ತೆಯಾಗಿದೆ’ ಎಂದು ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಸದ್ಯ ಈ ಬೀರುವಿನಲ್ಲಿ ಏನಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ!
Also Read : ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ – ವಿಚ್ಚೇದನ ಕಾರಣ ಬಿಚ್ಚಿಟ್ಟ ಕಿರಣ್ ರಾವ್
ಮತ್ತೊಮ್ಮೆ ಶಿಲ್ಪಾ ವಿಚಾರಣೆ?
ಪ್ರಕರಣದ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ, ‘ಈ ವಿಚಾರದಲ್ಲಿ ತನ್ನ ಸಹಭಾಗಿತ್ವ ಏನೂ ಇಲ್ಲ. ರಾಜ್ ಕುಂದ್ರಾ ತಯಾರಿಸಿದ್ದು ಅಶ್ಲೀಲ ಸಿನಿಮಾಗಳಲ್ಲ, ಬರೀ ಕಾಮಪ್ರಚೋದಕ ಸಿನಿಮಾಗಳು ಮಾತ್ರ. ಅವರ ಆಪ್ನಲ್ಲಿರುವ ಸಿನಿಮಾಗಳು ಅಶ್ಲೀಲ ಸಿನಿಮಾಗಳಲ್ಲ, ಬದಲಾಗಿ ಇತರ ಓಟಿಟಿ ವೇದಿಕೆಯಲ್ಲಿರುವಂತಹ ಕಾಮಪ್ರಚೋದಕ ಸಿನಿಮಾಗಳು’ ಎಂದು ಶಿಲ್ಪಾ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಆದರೆ, ಪೋಲಿಸರು ವಶಪಡಿಸಿಕೊಂಡಿರುವ ಕೆಲ ದಾಖಲೆಗಳಲ್ಲಿ ಶಿಲ್ಪಾ ಅವರ ಸಹಿ ಕೂಡ ಇರುವುದು ಪತ್ತೆಯಾಗಿದೆ. ಹಾಗಾಗಿ, ಅವರನ್ನು ಇನ್ನೊಮ್ಮೆ ವಿಚಾರಣೆ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Also Read :ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ
ರಾಜ್ ಕುಂದ್ರಾಗೆ ಸಂಕಷ್ಟ!
ಇದೆಲ್ಲದರ ಜೊತೆಗೆ ರಾಜ್ ಕುಂದ್ರಾ ಕಂಪನಿಯಲ್ಲಿದ್ದ ನಾಲ್ವರು ಉದ್ಯೋಗಿಗಳು ಈ ಪ್ರಕರಣದಲ್ಲಿ ಸಾಕ್ಷಿ ಹೇಳಲಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ಭಾನುವಾರ (ಜು.25) ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಜಾರಿ ನಿರ್ದೇಶನಾಲಯ ಕೂಡ (Enforcement Directorate) ರಾಜ್ ಕುಂದ್ರಾ ಮೇಲೆ ಎಫ್ಇಎಂ ಆಕ್ಟ್ (Foreign Exchange Management Act) ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಈಗಾಗಲೇ ಮುಂಬೈ ಪೊಲೀಸರಿಗೆ ಎಫ್ಐಆರ್ ಕಾಪಿ ಕೊಡುವಂತೆ ಇಡಿ ಕೇಳಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ ಕುಂದ್ರಾಗೆ ಇನ್ನಷ್ಟು ಸಂಕಷ್ಟ ತಂದೊಡ್ಡುವುದು ಖಚಿತ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh